ಸಮೃದ್ಧ ಮಳೆ-ಬೆಳೆಗಾಗಿ ದುರ್ಗಾದೇವಿಗೆ ಉಡಿ

Maski Pooje
ಮಸ್ಕಿಯಲ್ಲಿ ಕಟ್ಟೆ ದುರ್ಗಾದೇವಿ ಮುಂಭಾಗದಲ್ಲಿ ಭಕ್ತರು ಭಜನೆ ಮಾಡಿದರು. ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ಪಂಪಾಪತಿ ಹೆಸರೂರು, ಸಿದ್ದಯ್ಯ ಹೆಸರೂರು, ವಿಶ್ವನಾಥ ಸೊಪ್ಪಿಮಠ, ದೊಡ್ಡಬಸವ ಹೆಸರೂರು, ಶೇಖರಯ್ಯ ಸೊಪ್ಪಿಮಠ ಇದ್ದರು.
Published on

ಮಸ್ಕಿ: ಸಮೃದ್ಧ ಮಳೆ, ಬೆಳೆಗಾಗಿ ಪಟ್ಟಣದ ಮಲ್ಲಿಕಾರ್ಜುನ ದೇವರ ತೇರಿನ ಮುಂಭಾಗದಲ್ಲಿರುವ ದುರ್ಗಾದೇವಿಗೆ ಮುತ್ತೈದೆಯರು ಉಡಿ ತುಂಬುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಪ್ರತಿವರ್ಷ ಮುಂಗಾರು ಮಳೆ ಆರಂಭವಾಗುವ ಸಮಯದಲ್ಲಿ ದೇವಿಗೆ ಉಡಿತುಂಬುವ ಸಂಪ್ರದಾಯವಿದೆ. ಇಲ್ಲಿನೀಭ್ರಮರಾಂಬ ದೇವಿ ಮತ್ತು ಕಟ್ಟೆ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಭಕ್ತರು ತೆರಳಿ ಉಡಿ ತುಂಬುವ ಕಾರ್ಯ ನಡೆಸಿದರು.

ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ಪಂಪಾಪತಿ ಹೆಸರೂರು, ಸಿದ್ದಯ್ಯ ಹೆಸರೂರು, ವಿಶ್ವನಾಥ ಸೊಪ್ಪಿಮಠ, ದೊಡ್ಡಬಸವ ಹೆಸರೂರು, ಶೇಖರಯ್ಯ ಸೊಪ್ಪಿಮಠ ಹಾಗೂ ರೈತರು, ಮಹಿಳೆಯರು ಇದ್ದರು. ರಾತ್ರಿಯಿಡೀ ಭಜನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net