ಹೆಣ್ಣಿಗೆ ಪ್ರೋತ್ಸಾಹ ಮುಖ್ಯ

8Kolavi1
ಮಮದಾಪುರ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನವನ್ನು ವಿದ್ಯಾರ್ಥಿನಿ ಉದ್ಘಾಟಿಸಿದಳು. ಮೋಹನ ಭಸ್ಮೆ, ಜಿ.ಬಿ.ಬಳಗಾರ, ಸುರೇಶ ಸನದಿ, ಕೆಂಪಣ್ಣ ಮೈಲಣ್ಣವರ ಇತರರಿದ್ದರು.
Published on

ಕೊಳವಿ: ಬಡ, ದುರ್ಬಲ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರತಿವರ್ಷ ವಿಶ್ವ ಮಹಿಳಾ ದಿನ ಆಚರಿಸಲಾಗುತ್ತದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಗಸ್ತೆ ಹೇಳಿದರು.

ಮಮದಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಗ್ರಾಮ ಸಭೆಯಲ್ಲಿ ಮಾತನಾಡಿ, ಬದುಕಿನ ಎಲ್ಲ ಸವಾಲುಗಳನ್ನು ಎದುರಿಸಿ, ಗಟ್ಟಿಗಿತ್ತಿಯಾಗಿ ನಿಲ್ಲುವ ಶಕ್ತಿ ಮಹಿಳೆಗಿದೆ. ಇಂದು ಎಲ್ಲ ೇತ್ರಗಳಲ್ಲಿ ಮಹಿಳೆ ಛಾಪು ಮೂಡಿಸಿದ್ದಾಳೆ ಎಂದರು.

ವಕೀಲೆ ಸರೋಜಿನಿ ಬನ್ನೂರ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯೆ ಅನ್ನಪೂರ್ಣಾ ಭಜಂತ್ರಿ, ಉಪಾಧ್ಯೆ ಸುನಂದಾ ಮುರಗೋಡ, ಶಿಕಿ ಸುಜಾತಾ ಹೊಸಮಠ, ನೀಲೋರ್​ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ತಾಲೂಕು ದಂಡಾಧಿಕಾರಿ ಮೋಹನ ಭಸ್ಮೆ, ೇತ್ರ ಶಿಣಾಧಿಕಾರಿ ಜಿ.ಬಿ.ಬಳಗಾರ, ಗ್ರಾಪಂ ಸದಸ್ಯರಾದ ಸುರೇಶ ಸನದಿ, ಕೆಂಪಣ್ಣ ಮೈಲಣ್ಣವರ, ಪ್ರಭು ಒಡೆಯರ, ಮಹೇಶ ಪಾಟೀಲ, ವೀರಭದ್ರ ಮೈಲನ್ನವರ, ಅಶೋಕ ಗೋಪಾಲಿ, ಸಿದ್ದಪ್ಪ ಕಳ್ಯಾಗೋಳ, ಎಸ್​.ಜಿ.ಕಮತ ಇತರರಿದ್ದರು. ಪಿಡಿಒ ವಿನಾಯಕ ಮಾಳಿ ಸ್ವಾಗತಿಸಿದರು. ಚಂದ್ರಶೇಖರ ಸೀಗಿಹಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net