

ಸಿಂಧನೂರು: ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸುವ ಹೆಣ್ಣು ಮಗುವಿನ ಭವಿಷ್ಯದ ದೃಷ್ಟಿಯಿಂದ ನಗರದ ಶ್ರೀ ಉಮಾಶಂಕರ ಫೌಂಡೇಷನ್‌ನಿಂದ ಮೇಧಾಶ್ರೀ ಭವಿಷ್ಯ ನಿಧಿ ಯೋಜನೆಯಡಿ 10 ಸಾವಿರ ರೂ. ಮುದ್ದತ್ತು ಠೇವಣಿ ಇರಿಸಲು ಮುಂದಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಫೌಂಡೇಷನ್ ಅಧ್ಯಕ್ಷ ಎಸ್.ಎಸ್.ಹಿರೇಮಠ ಮತ್ತು ಕಾರ್ಯದರ್ಶಿ ಶಿವಕುಮಾರ ಹಿರೇಮಠ ಅವರು, ವಾಣಿಜ್ಯೋದ್ಯಮಿ ರಾಜೇಶ ಹಿರೇಮಠ ಅವರ 53ನೇ ವರ್ಷದ ಜನ್ಮದಿನದ ಪ್ರಯುಕ್ತ ಜು.27 ರಂದು ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣು ಮಗುವಿಗಾಗಿ 10 ಸಾವಿರ ರೂ. ಠೇವಣಿ ಇಡಲಾಗುತ್ತಿದೆ.
ಮಗುವಿಗೆ 18 ವರ್ಷ ತುಂಬಿದ ಬಳಿಕ ಈ ಹಣವನ್ನು ಪಾಲಕರು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.