ದೇಶಕ್ಕೆ ಸಂವಿಧಾನ ಅತ್ಯಮೂಲ್ಯ ಕೊಡುಗ

14npn1
Published on

ನಿಪ್ಪಾಣಿ: ಬಾಬಾಸಾಹೇಬ ಅಂಬೇಡ್ಕರ್​ ಜೀವನಗಾಥೆ ನಮಗೆಲ್ಲರಿಗೂ ಸ್ಫೂರ್ತಿ. ಅವರ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳಿಯ ನಗರಸಭೆಯ ಆವರಣದಲ್ಲಿ ಡಾ. ಬಿ.ಆರ್​. ಅಂಬೇಡ್ಕರ್​ ಜನ್ಮದಿನದ ನಿಮಿತ್ತ ಸೋಮವಾರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಸಮಾನತೆಯ ಹರಿಕಾರರಾಗಿ ದೇಶದ ಸುರತೆ ಮತ್ತು ದೇಶವಾಸಿಗಳ ಹಿತಚಿಂತನೆಗಾಗಿ ಸಂವಿಧಾನ ರಚಿಸಿರುವುದು ಎಂದೂ ಮರೆಯಲಾಗದ ಕೊಡುಗೆ. ಅವರು ಎಂದಿಗೂ ಅಜರಾಮರ ಎಂದು ತಿಳಿಸಿದರು. ನಗರಸಭೆಯ ದಿ. ವಿಶ್ವಾಸರಾವ ಶಿಂಧೆ ಸಭಾಗಹದಲ್ಲಿ ಡಾ.ಅಂಬೇಡ್ಕರ್​ ಜನ್ಮದಿನ ಆಚರಿಸಲಾಯಿತು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಅಧ್ಯೆ ಸೋನಲ್​ ಕೊಠಡಿಯಾ, ಉಪಾಧ್ಯ ಸಂತೋಷ ಸಾಂಗಾವಕರ, ವಿಲಾಸ ಗಾಡಿವಡ್ಡರ, ಬಾಳಾಸಾಹೇಬ ದೇಸಾಯಿ ಸರ್ಕಾರ, ರಾಜೇಂದ್ರ ಗುಂದೇಶಾ, ಜಯವಂತ ಭಾಟಲೆ, ದತ್ತಾತ್ರೇಯ ಜೋತ್ರೆ, ದತ್ತಾ ನಾಯಿಕ, ಆಶಾ ಟವಳೆ, ನೀತಾ ಬಾಗಡೆ, ಸುನೀಲ ಪಾಟೀಲ, ರಾಜೇಶ ಕೊಠಡಿಯಾ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net