50 ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ

Untitled design
ಗಂಗಾವತಿ ಬಾಲಕರ ಸ.ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಿನಿ ಜಾಬ್ ೇರ್‌ನಲ್ಲಿ ಭಾಗವಹಿಸಿದ್ದ ಉದ್ಯೋಗಾಂಕ್ಷಿಗಳು. ಉದ್ಯೋಗ ವಿನಿಮಯ ಕೇಂದ್ರದ ಸಂಚಾಲಕ ಶಿವಯೋಗಿ ಹೊಸಳ್ಳಿ, ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ, ಉಪನ್ಯಾಸಕರಾದ ಸೋಮಶೇಖರಗೌಡ, ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Published on

ವಿಜಯವಾಣಿ ಸುದ್ದಿಜಾಲ ಗಂಗಾವತಿ
ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮಿನಿ ಜಾಬ್ ೇರ್ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಪದವಿ ನಿರುದ್ಯೋಗಿಗಳು ಭಾಗವಹಿಸಿದ್ದು, 150ಕ್ಕೂ ಹೆಚ್ಚು ನೋಂದಣಿಯಾಗಿತ್ತು. ಖಾಸಗಿ ವಲಯದ ಐದು ಸಂಸ್ಥೆಗಳು ಆಯ್ಕೆ ಪ್ರಕ್ರಿಯೆ ನಡೆಸಿದ್ದು, 50 ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ ದೊರೆತಿದೆ.


ಈ ಬಗ್ಗೆ ಉದ್ಯೋಗ ವಿನಿಮಯ ಕೇಂದ್ರದ ಸಂಚಾಲಕ ಶಿವಯೋಗಿ ಹೊಸಳ್ಳಿ ಮಾತನಾಡಿ, ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಮೇಳೆ ಆಯೋಜಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಸಂದರ್ಶನಕ್ಕೆ ಹಾಜರಾಗುವ ನಿರುದ್ಯೋಗಿಗಳಿಗೆ ಉದ್ಯೋಗದ ಮಾಹಿತಿ ನೀಡಲಾಗಿದ್ದು, ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಂಪನಿಗಳೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದರು.


ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ, ಉಪನ್ಯಾಸಕರಾದ ಸೋಮಶೇಖರಗೌಡ ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net