

ಮುದಗಲ್: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೇತ್ರ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಶನಿವಾರ ನಡೆಯಿತು.
ರಾಮಚಂದ್ರ ಶೆಟ್ಟಿ ಹಾಗೂ ಸಂಧ್ಯಾ ಸುರಪುರ ಸ್ಮರಣಾರ್ಥ, ಜಿಲ್ಲಾ ಅಂದತ್ವ ನಿವಾರಣಾ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ನೇತ್ರ ತಪಾಸಣೆ ಹಾಗೂ ಉಚಿತವಾಗಿ ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಿತು. ಕಳೆದ ತಿಂಗಳಲ್ಲಿ ನೇತ್ರ ಉಚಿತ ಚಿಕಿತ್ಸಾ ಶಿಬಿರದ ವೇಳೆ ವಿದ್ಯುತ್ ತೊಂದರೆಯಾಗಿ ಮುಂದೂಡಲಾಗಿತ್ತು. ಶುಕ್ರವಾರ ಮತ್ತು ಶನಿವಾರ ಎರಡು ದಿನ ನಡೆದ ನೇತ್ರ ಶಸ್ತ್ರ ಶಿಬಿರದಲ್ಲಿ 20 ಕ್ಕೂ ಅಧಿಕ ವೈದ್ಯರು 300 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿದರು.
ದಿವ್ಯದೃಷ್ಟಿ ಫೌಂಡೇಶನ್ ಕಾರ್ಯದರ್ಶಿ ಡಾ.ಗುರುರಾಜ ದೇಶಪಾಂಡೆ, ಡಾ.ಚೇತನ್ ಸದಾನಂದ, ಡಾ.ವಿಜಯಕುಮಾರ, ಡಾ.ರೋಹಿಣಿ ಪಾಟೀಲ್, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅನಂತ ಕುಮಾರ, ಡಾ.ವಿನೋದ ಕುಮಾರ, ಪ್ರಮುಖರಾದ ಮಧು ಫಾರಂ ವೆಂಕಟೇಶ ಕುಲಕರ್ಣಿ, ರಾಘವೇಂದ್ರ ಶೆಟ್ಟಿ ಸುರಪುರ, ಸಂಗಮೇಶ ಸರಗಣಾಚಾರಿ, ರವಿ ಕಟ್ಟಿಮನಿ ಡಾ. ರವಿರಾಜ, ಎಚ್‌ಎಂ. ಲೋಕೇಶ ಸಿಬ್ಬಂದಿಗಳಾದ ಮುಕ್ತಮ್ ಸಾಬ್, ಶ್ರೀಧರ, ಬಸವರಾಜ, ರಂಗನಾಥ, ಅರ್ಜುನ, ಬಸಯ್ಯಸ್ವಾಮಿ, ಕೃಷ್ಣ ಇದ್ದರು.