

ಶೃಂಗೇರಿ: ತಾಲೂಕಿನ ಕುಂಚೆಬೈಲು, ಹೊಸೂರು ಮತ್ತು ಮಾರನಕೊಡಿಗೆ ಸಮೀಪ
ಕಾಡಾನೆ ಸಂಚರಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಬಾಳೆಹೊನ್ನೂರು
ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಈಗ ತಾಲೂಕಿನಲ್ಲೂ ಸಂಚರಿಸುತ್ತಿದೆ. ಈಗ ಎರಡು
ಆನೆಗಳ ಹೆಜ್ಜೆ ಕಾಣಿಸಿಕೊಂಡಿದ್ದು, ಅರಣ್ಯಇಲಾಖೆ ಕಾಡಾನೆ ಸಂಚಾರದ ಬಗ್ಗೆ ಮಾಹಿತಿ
ನೀಡಿ ಪ್ರಕಟಣೆ ಹೊರಡಿಸಿ ಯಾರೂ ರಾತ್ರಿ ಒಂಟಿಯಾಗಿ ಸಂಚರಿಸ ಬಾರದು ಹಾಗೂ
ಅರಣ್ಯದೊಳಗೆ ಹೋಗಬಾರದು. ಆನೆ ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ
ನೀಡಬೇಕು ಎಂದು ಸೂಚನೆ ನೀಡಲಾಗಿದೆ.