ಸುಳ್ಳು ಆರೋಪಗಳ ಪಾದಯಾತ್ರೆ, ಆಡಳಿತ ಚುಕ್ಕಾಣಿ ಹಿಡಿಯಲು ಯತ್ನ:ಜಾರ್ಜ್​ ಆರೋಪ

91
Published on

ಚಿಕ್ಕಬಳ್ಳಾಪುರ: ವಿಪಕ್ಷಗಳು ಸುಳ್ಳು ಆರೋಪಗಳ ಮೂಲಕ ಪಾದಯಾತ್ರೆ ನಡೆಸಿ, ಆಡಳಿತ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿವೆ ಎಂದು ಇಂಧನ ಸಚಿವ ಕೆ.ಎ.ಜಾರ್ಜ್​ ಆರೋಪಿಸಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳಿಗೆ ಹಿಂಬಾಗಿಲಿನಿಂದಲಾದರೂ ಅಧಿಕಾರ ಹಿಡಿಯಬೇಕೆಂಬ ಭಾವನೆ ಬಂದು ಬಿಟ್ಟಿದೆ. ಇದಕ್ಕೆ ಕಾಂಗ್ರೆಸ್​ ಸರ್ಕಾರವು ಬಿದ್ದು ಹೋಗುತ್ತದೆ ಆಸೆಯಲ್ಲಿ ಚೆನ್ನಾಗಿ ಮಾತಾಡುತ್ತಿದ್ದಾರೆ. ಇದು ಹಗಲಗನಸು. ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಸುಳ್ಳು. ಯಾವುದೇ ದಾಖಲೆಯನ್ನು ಕೊಟ್ಟಿಲ್ಲ. ಮುಡಾ ಹಗರಣ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟವು ನಿರ್ಧಾರ ಕೈಗೊಂಡು, ರಾಜ್ಯಪಾಲರಿಗೆ ಸೂಕ್ತ ಮಾಹಿತಿ ನೀಡಿದೆ ಎಂದರು.

ಹಿಂದೆ ರಾಹುಲ್​ ಗಾಂಧಿ ದೇಶದ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಭಾರತ್​ ಜೋಡೋ ಯಾತ್ರೆ, ಹಾಗೆಯೇ ಬಳ್ಳಾರಿ ಗಣಿ ಧಣಿಗಳು ಸವಾಲೆಸೆದಾಗ ರಾಜ್ಯದಲ್ಲಿ ಕಾಂಗ್ರೆಸ್​ ಪಾದಯಾತ್ರೆಯನ್ನು ಕೈಗೊಂಡಿದ್ದು ಇದು ಜನರಿಗಾಗಿ ನಡೆದ ಹೋರಾಟಗಳು. ಆದರೆ, ಇತ್ತೀಚೆಗೆ ಕೆಲವರು (ಬಿಜೆಪಿ ಮತ್ತು ಜೆಡಿಎಸ್​) ಪಾದಯಾತ್ರೆ ಎನ್ನುವುದು ಒಂದು ಹವ್ಯಾಸ ಎನ್ನುವಂತೆ ಸುಳ್ಳು ಆರೋಪಗಳೊಂದಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಸರ್ಕಾರವು ಸುಭದ್ರವಾಗಿದೆ. ಸ್ಪಷ್ಟ ಬಹುಮತವಿರುವುದರಿಂದ ಯಾವುದೇ ಕಾರಣಕ್ಕೂ ಪತನಗೊಳ್ಳುವ ಮಾತೇ ಬರುವುದಿಲ್ಲ. ಜನಪರ ಯೋಜನೆಗಳ ಮೂಲಕ ಉತ್ತಮ ಆಡಳಿತವನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪು$್ಪ ಮಾಡಿಲ?್ಲ. ಅವರು ರಾಜೀನಾಮೆಯನ್ನು ನೀಡಬೇಕಾಗಿಲ್ಲ. ಬಿಜೆಪಿ ಸರ್ಕಾರದಲ್ಲಾದ ಆದೇಶಗಳ ವಿರುದ್ಧ ಬಿಜೆಪಿಯೇ ಹೋರಾಟ ನಡೆಸುತ್ತಿದೆ. ಇದನ್ನು ನಂಬಬೇಕಾ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net