

ಮಡಿಕೇರಿ: ಚೆಟ್ಟಳ್ಳಿ ಸಮೀಪದ ಪೊನ್ನತ್ಮೊಟ್ಟೆಯ ಕೂರ್ಗ್ ಹಂಟರ್ಸ್ ಯುವಕರ ಸಂಘದ ವತಿಯಿಂದ ಎರಡನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ ಮಾ.೩ ರಿಂದ ೫ ವರೆಗೆ ಪೊನ್ನತ್ಮೊಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕೂರ್ಗ್ ಹಂಟರ್ಸ್ ಯುವಕ ಸಂಘದ ಕಾರ್ಯದರ್ಶಿ ಉನೈಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.೨೭ ತಂಡಗಳ ನೋಂದಣಿಗೆ ಕೊನೆಯ ದಿನವಾಗಿದೆ. ಮೊದಲು ನೋಂದಾಯಿತ ೫೦ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಅವರು, ರೂ.೧೫೦೦ ಮುಂಗಡ ಹಣ ಪಾವತಿಸಿ ನೋಂದಣಿ ಮಾಡಿಕೊಂಡ ತಂಡಗಳನ್ನು ಮಾತ್ರ ಟೈಸ್ ಪ್ರಕಿಯೆಯಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಥಮ ಬಹುಮಾನ ರೂ.೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಅದಲ್ಲದೇ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿದೆ. ಮೈದಾನ ಪ್ರವೇಶ ಶುಲ್ಕ ರೂ.೩೦೦೦ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೭೦೨೨೩೬೮೭೭೫, ೯೬೧೧೨೫೧೩೧೧ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಉನೈಸ್ ತಿಳಿಸಿದ್ದಾರೆ.