ಫುಟ್ಬಾಲ್: ಮೇ೧೨ರಿಂದ ಫ್ರೀ ಕ್ವಾರ್ಟರ್ ಪಂದ್ಯ

MDK05
Published on

ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಪಂದ್ಯದ ಫ್ರೀ ಕ್ವಾರ್ಟರ್ ಪಂದ್ಯ ಮೇ.೧೨ ರಂದು ನಡೆಯಲಿದ್ದು, ಪ್ರಶಸ್ತಿಗಾಗಿ ೧೬ ತಂಡಗಳು ಸೆಣಸಾಟ ನಡೆಸಲಿದೆ.


ದಿನ ಮೊದಲ ಪಂದ್ಯದಲ್ಲಿ ಹೊಸೋಕ್ಲು ತಂಡ ೪-೦ ಗೋಲುಗಳಿಂದ ಚಂಡಿರ ತಂಡವನ್ನು ಮಣಿಸಿತು. ತಂಡದ ಪರ ಪುನೀತ್ ೨, ನಿತೀನ್, ವಿಕ್ಕಿ ತಲಾ ಒಂದೊಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಪೊನ್ನಚ್ಚನ ತಂಡ ೧-೦ ಗೋಲುಗಳಿಂದ ತೋಟಂಬೈಲು ತಂಡವನ್ನು ಸೋಲಿಸಿತು. ತಂಡದ ಪರ ಪೂವಣ್ಣ ೧ ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.


ಕೊಂಪುಳೀರ ಮತ್ತು ಪೊಡನೋಳನ ತಂಡಗಳ ನಡುವಿನ ಪಂದ್ಯದಲ್ಲಿ ಇತ್ತಂಡಗಳು ೧-೧ ಗೋಲು ದಾಖಲಿಸಿ ಸಮಬಮ ಸಾಧಿಸಿತು. ಕೊಂಪುಳೀರ ತಂಡದ ಪರ ಸಾಮ್ರಾಟ್ ೧, ಪೊಡನೋಳನ ಪರ ಹರ್ಷ ೧ ಗೋಲು ದಾಖಲಿಸಿದರು. ನಂತರ ಪೆನಾಲ್ಟಿ ನಡೆದ ಶೂಟೌಟ್‌ನಲ್ಲಿ ಪೊಡನೋಳನ ತಂಡ ೪-೧ ಗೋಲುಗಳಿಂದ ಕೊಂಪುಳೀರ ತಂಡವನ್ನು ಮಣಿಸಿತು.


ಪಾಂಡನ ಮತ್ತು ಕೊಳಿಬೈಲು ನಡುವಿನ ಪಂದ್ಯದಲ್ಲಿ ಕೋಳಿಬೈಲು ತಂಡ ೨-೦ ಗೋಲುಗಳಿಂದ ಪಾಂಡನ ತಂಡವನ್ನು ಸೋಲಿಸಿತು. ತಂಡದ ಪರ ಉದಯ್, ಲವಿನ್ ತಲಾ ಒಂದೊಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಕಲ್ಲುಮುಟ್ಲು ತಂಡ ಚೊಂಡೀರ ತಂಡವನ್ನು ೬-೦ ಗೋಲುಗಳಿಂದ ಮಣಿಸಿತು. ತಂಡದ ಪರ ಕವನ್ ೩, ಭವನ್ ೨, ನಿಖಿಲ್ ೧ ಗೋಲು ದಾಖಲಿಸಿದರು.


ಕಟ್ಟೆಮನೆ ಮತ್ತು ಮರದಾಳು ತಂಡಗಳ ನಡುವಿನ ಪಂದ್ಯದಲ್ಲಿ ಯಾವುದೇ ಗೋಲು ದಾಖಲಿಸದೇ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಈ ಸಂದರ್ಭ ಕಟ್ಟೆಮನೆ ೪-೧ ಗೋಲುಗಳಿಂದ ಮರದಾಳು ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಕಾಂಗೀರ ತಂಡ ೩-೦ ಗೋಲುಗಳಿಂದ ಹೊಸೋಕ್ಲು ತಂಡವನ್ನು ಸೋಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net