ಫುಟ್ಬಾಲ್: ೪ ತಂಡಗಳು ಸಮಿಫೈನಲ್‌ಗೆ ಲಗ್ಗೆ

gowda footbal
Published on

ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ಕೊಡಗು ಇವರ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಜಂಡ್ರ ಐಯ್ಯಂಡ್ರ, ಪೊಕ್ಕುಳಂಡ್ರ ಹಾಗೂ ಕಡ್ಯದ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ಮೊದಲನೇ ಪ್ರೀ ಕ್ವಾರ್ಟರ್ ಪಂದ್ಯದ ಮುಕ್ಕಾಟಿ ಹಾಗೂ ಐಯ್ಯಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಯಾವುದೇ ಗೋಲ್‌ಗಳಿಸಿದೆ ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಐಯ್ಯಂಡ್ರ ತಂಡ ಜಯಗಳಿಸಿತು. ೨ನೇ ಪಂದ್ಯದಲ್ಲಿ ಚಂಡೀರ ಹಾಗೂ ಪೂಳಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಂಡಿರ ತಂಡ ೪ ಗೋಲ್ಗಳಿಸಿ ಜಯಗಳಿಸಿತು. ಮೂರನೇ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಕೊಳಂಬೆ ಹಾಗೂ ಉಳುವಾರನ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಯಾವುದೇ ಗೋಲ್ ಬಾರಿಸದೆ ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಕೊಳಂಬೆ ತಂಡ ಜಯಗಳಿಸಿತು. ನಾಲ್ಕನೇ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಮಂಜಂಡ್ರ ಹಾಗೂ ಬಾರಿಕೆ ತಂಡಗಳ ನಡುವೆ ನಡೆಯಿತು ಮಂಜಂಡ್ರ ತಂಡ ೨ ಗೋಲ್ ಗಳಿಸಿಕೊಂಡು ಜಯಗೊಳಿಸಿತು.

ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಡ್ಯದ ಹಾಗೂ ಕೊಂಪುಳಿರಾ ತಂಡಗಳ ಸೆಣಸಾಟ ನಡೆಸಿತು. ಎರಡು ತಂಡಗಳು ಯಾವುದೇ ಗೋಲ್‌ಬಾರಿಸದ ಕಾರಣ ಟ್ರೈ ಬ್ರೇಕರ್‌ನಲ್ಲಿ ಕಡ್ಯದ ತಂಡ ಜಯಗಳಿಸಿತು. ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಪಡಿಕಲ್ ಹಾಗೂ ಪೊಕ್ಕುಳಂಡ್ರ ತಂಡಗಳ ನಡುವಿನ ನಡೆಯಿತು. ಎರಡು ತಂಡಗಳು ತಲಾ ೧ ಗೋಲ್‌ಗಳಿಸಿ ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಪೊಕ್ಕುಲಡ್ರ ತಂಡ ಗೆದ್ದು ಸೆಮಿ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ಮೂರನೇ ಕ್ವಾರ್ಟರ್ ಫೈನಲ್ ಪಂದ್ಯ ಐಯ್ಯಂಡ್ರ ಹಾಗೂ ಚಂಡಿರ ತಂಡಗಳ ನಡುವೆ ನಡೆಯಿತು. ಪಂದ್ಯದಲ್ಲಿ ಚಂಡೀರ ತಂಡ ೧ ಗೋಲ್ ಹಾಗೂ ಐಯ್ಯಂಡ್ರ ತಂಡ ೩ ಗೋಲು ಗಳಿಸಿಕೊಂಡು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು. ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಳಂಬೆ ಹಾಗೂ ಮಂಜಂಡ್ರ ತಂಡಗಳ ನಡುವೆ ನಡೆಯಿತು. ಕೊಳಂಬೆ ತಂಡ ೨ ಗೋಲ್ ದಾಖಲಿಸಿದರೆ ಮಂಜಂಡ್ರ ತಂಡ ೪ ಗೋಲ್‌ಗಳಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net