ಮೇ ೬ರಿಂದ ಗೌಡ ಫುಟ್‌ಬಾಲ್ ಟ್ರೋಫಿ

23mdk04
Published on

ಗೌಡ ಫುಟ್‌ಬಾಲ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ೬ನೇ ವರ್ಷದ ಗೌಡ ಫುಟ್‌ಬಾಲ್ ಟ್ರೋಪಿ ೨೦೨೩ ಪಂದ್ಯಾವಳಿ ಮೇ ೬ರಿಂದ ಆರಂಭವಾಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಬಡುವಂಡ್ರ ದುಶ್ಯಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮರಗೋಡು ಸರಕಾರಿನ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು ೮೦ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಂಡಗಳ ನೋಂದಣಿಗೆ ಮಾರ್ಚ್ ೨೮ ಕೊನೆಯ ದಿನವಾಗಿದೆ. ಪ್ರಥಮ ಬಹುಮಾನ ೬೦ ಸಾವಿರ ನಗದು, ದ್ವಿತೀಯ ಬಹುಮಾನ ೪೦ ಸಾವಿರ, ತೃತೀಯ ಮತ್ತು ನಾಲ್ಕನೇ ಬಹುಮಾನ ತಲಾ ೧೦ ಸಾವಿರ ರೂ. ನೀಡಲಾಗುವುದು.


ಈ ಬಾರಿ ವಿಶೇಷವಾಗಿ ಮರಗೋಡು, ಕಟ್ಟೆಮಾಡು, ಹೊಸ್ಕೇರಿ ಹಾಗು ಅರೆಕಾಡು ಗ್ರಾಮದ ನಿವಾಸಿಗಳಿಗಗಿ ಸಮುದಾಂಯಗಳ ಮಧ್ಯೆ ಫುಟ್‌ಬಾಲ್ ಆಯೋಜಿಸಲಾಗಿದೆ. ಈ ಪಂದ್ಯಾಟಕ್ಕೆ ಈಗಾಗಗಲೇ ೧೦ ತಂಡಗಳು ನೋಂದಣಿ ಆಗಿದೆ. ಹೆಚ್ಚಿನ ವಿವರಗಳಿಗೆ ರೋಷನ್ ಬೊಳ್ಳೂರು (೯೬೧೧೫೦೨೨೭೦)ನ ಅಥವಾ
ಕಾಂಗೀರ್ ಮೋನಿಷ್ (೯೦೦೮೫೩೮೯೩೨) ಅವರನ್ನು ಸಂರ್ಕಿಸಬಹುದು ಎಂದರು,


ಕಾಂಗೀರ್ ಮೋನಿಷ್ (೯೦೦೮೫೩೮೯೩೨) ಅವರನ್ನು ಸಂರ್ಕಿಸಬಹುದು ಎಂದರು,

ಖಜಾಂಚಿ ಸುಜಯ್, ಸಹಕಾರ್ಯದರ್ಶಿ ಪುನೀತ್ ಕೊಂಪುಳಿರ, ಕಾರ್ಯದರ್ಶಿ ಇಟ್ಟಣಿಕೆ ನವನೀತ್ ಹಾಗೂ ಹಿರಿಯ ಸಲಹೆಗಾರ ರಾಕೇಶ್ ಕಟ್ಟೆಮನೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net