ವ್ಯತಿರಿಕ್ತ ಪರಿಣಾಮ ಬೀರಿದೆ ಮೌಢ್ಯ

Oplus_131072
ನಂದಗುಡಿಯ ಭಕ್ತರ ಸ್ವಗೃಹದಲ್ಲಿ ಬುಧವಾರ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಅವರಿಗೆ ಪಾದಪೂಜೆ ನಡೆಯಿತು. ನಾಗಸಂದ್ರ ಶಾಖಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನಗರ್ತ ವೀರಶೈವ ಮುಖಂಡರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಧಾರ್ಮಿಕತೆಯಿಂದ ಮನುಷ್ಯ ಶಾಂತಿ, ನೆಮ್ಮದಿ ಕಾಣಲು ಪ್ರತಿ ಹಳ್ಳಿಯಲ್ಲಿಯೂ ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ಧರ್ಮಾಚರಣೆಗಳು ಶಾಂತಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಂದಗುಡಿಯಲ್ಲಿ ಭಕ್ತರ ಸ್ವಗೃಹದಲ್ಲಿ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನಲ್ಲಿ ಮಾನವೀಯ ಸದ್ಗುಣಗಳನ್ನು ಬೆಳೆಸುವಲ್ಲಿ ಧರ್ಮಾಚರಣೆಗಳು ಪ್ರಮುಖ ಪಾತ್ರ ವಹಿಸುತ್ತದೆ. ನೆಮ್ಮದಿ, ಸುಖ, ಶಾಂತಿ ಪಡೆಯಲು ಎ್ಲರೂ ದೇವರ ಮೊರೆ ಹೋಗಬೇಕಾಗುತ್ತದೆ. ಪುರಾತನ ಕಾಲದಿಂದಲೂ ಹಿಂದು ಧರ್ಮದಲ್ಲಿ ದೇವಾಲಯಗಳಲ್ಲಿ ಮಾನವನಿಗೆ ಶಕ್ತಿ ಸಿಗುತ್ತದೆ ಎಂದರು.
ಆಧುನಿಕತೆ ಬೆಳೆದಂತೆ ಮೌಢ್ಯ ಯುವ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ದೇವರ ಮೇಲಿನ ಭಯ ಇಲ್ಲದಂತಾಗಿದೆ. ದೇವರ ಅಪ್ಪಣೆ ಇಲ್ಲದೆ ಭೂಮಿಯ ಮೇಲೆ ಒಂದು ಹುಲ್ಲುಕಡ್ಡಿ ಅಲುಗಾಡುವುದಿಲ್ಲ. ಇದನ್ನು ಪ್ರತಿಯೊಬ್ಬರು ಅರಿತುಕೊಂಡು ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ಜೀವನ ಸಾಗಿಸುವಂತಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net