ಬಾಲಕನ್ಯೆಯರಿಗೆ ಪಾದಪೂಜೆ

h13-durgadevi
Published on

ಹುಬ್ಬಳ್ಳಿ: ಇಲ್ಲಿಯ ಅರವಿಂದನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿಯ ದುರ್ಗಾಷ್ಟಮಿ ನಿಮಿತ್ತ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರ ಸಾನ್ನಿಧ್ಯದಲ್ಲಿ ನವದುರ್ಗಿ ಬಾಲಕನ್ಯೆಯರಿಗೆ ಪಾದಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಭಾನುವಾರ ಏರ್ಪಡಿಸಲಾಗಿತ್ತು.
ಶ್ರೀದೇವಿ ಮಹಾತ್ಮೆ ಪುರಾಣ, ಲಲಿತ ಸಹಸ್ರನಾಮಾವಳಿ ಸ್ತೋತ್ರ ಪಠಣೆ, ಪುಟ್ಟ ನವದುರ್ಗಿ ಬಾಲಕನ್ಯೆಯರಿಗೆ ಪಾದಪೂಜೆ, ವಸ್ತ್ರ-ಉಡುಗೆ ತೊಡಿಸಿ, ಉಡಿತುಂಬಿ ಅವರಿಂದ ದುರ್ಗಾಹೋಮಕ್ಕೆ ಪೂರ್ಣಾಹುತಿ ಅರ್ಪಿಸಿ, ಮುತ್ತೈದೆಯರಿಂದ ಆರತಿ ಬೆಳಗಿಸಲಾಯಿತು.
ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿ ಪಡೆದ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಸನ್ಮಾನಿಸಿದರು. ದೇವಸ್ಥಾನ ವತಿಯಿಂದ ಶಾಸಕರನ್ನು ಮಾತೋಶ್ರೀ ಅಮ್ಮನವರು ಸನ್ಮಾನಿಸಿದರು.
ಎಂಎಸ್‌ಐಎಲ್ ಮಾಜಿ ನಿರ್ದೇಶಕ ತೋಟಪ್ಪ ನಿಡಗುಂದಿ, ಕಾಂಗ್ರೆಸ್ ಮುಖಂಡ ಮಹೇಶ ದಾಬಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲ್ಮೀಕಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಹಿರಿಯರಾದ ವಿಠ್ಠಲ ಏಕಬೋಟೆ, ವಿಠ್ಠಲ ಬಗಲಿ, ರಾಜು ತಾಂಬೆ, ಪರಶುರಾಮ ಸುಳ್ಳದ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ರಾಜಶ್ರೀ ಬಗಲಿ, ಅನಿತಾ ಬಾಣದ, ಚನ್ನಮ್ಮ ದಾನಪ್ಪನವರ, ಜ್ಯೋತಿ ಗೌಳಿ, ಆಶಾ ರಜಪೂತ, ಅಕ್ಷತಾ ರೂಗಿ, ಲತಾ ಹಳಿಕೇರಿ, ಗುರಮ್ಮ ಹೆಳವರ, ಶೈಲಾ ಹುಟಗಿ, ರೇಖಾ ಸುಳ್ಳದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net