ಪಾದ ಮಸಾಜರ್ ಮೌಲ್ಯ 1.25 ಕೋಟಿ ರೂ.?

Foot massager
Published on

ಬೆಂಗಳೂರು : ಪಾದ ಮಸಾಜ್ ಮಾಡುವ ಯಂತ್ರದ ಮೌಲ್ಯದ ಬರೋಬ್ಬರಿ 1.25 ಕೋಟಿ ರೂ...!

ಹೌದು.. ವಿದೇಶಿ ಪೆಡ್ಲರ್‌ಗಳು ಪಾದ ಮಸಾಜರ್‌ನಲ್ಲಿ ಬೆಲೆ ಬಾಳುವ ಡ್ರಗ್ಸ್ ಬಚ್ಚಿಟ್ಟು ಫ್ರಾನ್ಸ್‌ನಿಂದ ಬೆಂಗಳೂರಿಗೆ ರವಾನಿಸಿದ್ದ ಕೋರಿಯರ್‌ನನ್ನು ವಿದೇಶಿ ಅಂಚೆ ಕಚೇರಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 2.34 ಕೆಜಿ ಎಂಡಿಎಂಎ ಡ್ರಗ್ಸ್ ಆಗಿದ್ದು, ಮೌಲ್ಯ 1.25 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಫ್ರಾನ್ಸ್‌ನಿಂದ ಭಾರತಕ್ಕೆ ವಿಮಾನದಲ್ಲಿ ಬಂದಿದ್ದ ಕೋರಿಯರ್‌ಗಳನ್ನು ಸ್ಕಾೃನಿಂಗ್ ಮಿಷನ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಪಾದ ಮಸಾಜರ್ ಪಾರ್ಸೆಲ್‌ನಲ್ಲಿ ಅನುಮಾನ ವ್ಯಕ್ತವಾಗಿದೆ. ಬಾಕ್ಸ್ ತೆಗೆದು ಮಸಾಜರ್‌ನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net