

ಸೋಮವಾರಪೇಟೆ : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ಹಾಗೂ ಕ್ರೀಡಾ ಸಮಿತಿ ವತಿಯಿಂದ
ಜಾತ್ರೋತ್ಸವ ಅಂಗವಾಗಿ ಫೆ.24 ಮತ್ತು 25ರಂದು ಮುಕ್ತ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಹೇಳಿದರು. 25ರಂದು ಕೊಡಗು ಮತ್ತು ಹಾಸನ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ. ಫುಟ್ಬಾಲ್ ಪ್ರಥಮ ಬಹುಮಾನ 1ಲಕ್ಷ ರೂ.ಗಳ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ 50 ಸಾವಿರ ರೂ. ನಗದು ಮತ್ತು ಟ್ರೋಫಿ, ಥ್ರೋಬಾಲ್ ವಿಜೇತರಿಗೆ ಪ್ರಥಮ 20 ಸಾವಿರ ರೂ. ನಗದು, ದ್ವಿತೀಯ 10 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. , ಮೊದಲು ನೋಂದಾಯಿಸಿದ 16 ತಂಡಗಳಿಗೆ ಮಾತ್ರ ಅವಕಾಶ. ಫುಟ್ಬಾಲ್ ತಂಡ ನೋಂದಣಿಗೆ ಫೆ.22 ಸಂಜೆ 4 ಗಂಟೆ ಒಳಗೆ ಹಾಗೂ ಥ್ರೋಬಾಲ್ ನೋಂದಣಿಗೆ ಫೆ.25ರ ಬೆಳಗ್ಗೆ 9ರೊಳಗೆ ಅವಕಾಶವಿರುತ್ತದೆ ಎಂದರು. 25ರಂದು ಬೆಳಗ್ಗೆ 8ಕ್ಕೆ ಮುಕ್ತ ಗುಡ್ಡಗಾಡು ಓಟ ಆಯೋಜಿಸಲಾಗಿದೆ. ಸ್ಥಳದಲ್ಲೇ ಉಚಿತವಾಗಿನೋಂದಾಯಿಸಿಕೊಳ್ಳಬಹುದು. ವಿಜೇತರಿಗೆ ಅಕರ್ಷಕ ಬಹುಮಾನ ನೀಡಲಾಗುವುದು ಎಂದರು. ಅಂದು ಮಧ್ಯಾಹ್ನ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯೂ ನಡೆಯಲಿದೆ. ಹೆಚ್ಚಿನ ವಿವರಗಳಿಗೆ 94818 15446, 94808 53537 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ.ಗುರು ಪ್ರಸಾದ್, ಉಪಾಧ್ಯಕ್ಷ ಸುಮಂತ್ ಕೂಗೂರು, ಕಾರ್ಯದರ್ಶಿ ಸಿ.ಇ.ವೆಂಕಟೇಶ್, ಪದಾಧಿಕಾರಿ ಜಿ.ಬಿ.ಯೋಗೇಶ್ ಇದ್ದರು.