ಟೀಂ ಭಗವತಿಗೆ 3ನೇ ಬಾರಿ ವಿಜಯ ಮಾಲೆ

FOOT BALL
Published on

ಮಡಿಕೇರಿ:

ಮ್ಯಾನ್ಸ್ ಕಾಂಪೌAಡ್ ಕ್ಲಬ್(ಎಂಸಿಸಿ) ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಜಯಗಳಿಸಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಟೀಂ ಭಗವತಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸಂಗA ಎಫ್‌ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕಳೆದ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಗವತಿ ಹಾಗೂ ಸಂಗA ತಂಡಗಳ ನಡುವೆ ಸೋಮವಾರ ರೊಚಕತೆಯಿಂದ ಪಂದ್ಯಾಟ ನಡೆಯಿತು. ಉಭಯ ತಂಡಗಳು ಪೈಪೋಟಿಯೊಂದಿಗೆ ಸೆಣೆಸಾಟ ನಡೆಸಿದವಾದರೂ ಬಲಿಷ್ಠವಾಗಿದ್ದ ಭಗವತಿ ತಂಡ ಸಂಗA ತಂಡವನ್ನು 5-1 ಗೋಲುಗಳಿಂದ ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಸಂಗA ತಂಡ ಎರಡನೇ ಸ್ಥಾನಕ್ಕೆ ತೃಪ್ತಿಕೊಟ್ಟುಕೊಳ್ಳಬೇಕಾಯಿತು.

ಸಂಜೆ ನಡೆದ ಅಂತಿಮ ಪಂದ್ಯಾವಳಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಆಟಗಾರರನ್ನು ಪರಿಚಯಿಸಿಕೊಳ್ಳುವದರ ಮೂಲಕ ಉದ್ಘಾಟಿಸಿದರು. ನಂತರ ಎಂಸಿಸಿ ಅಧ್ಯಕ್ಷ ಎಂ.ಎ.ಕ್ರಿಸ್ಟೋಫರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಎಂಸಿಸಿ ಹಿರಿಯ ಆಟಗಾರ, ಭಾರತ ತಂಡದಲ್ಲಿ ಆಡಿದ ಬೆಪ್ಪುರನ ಅಣ್ಣಪ್ಪ, ಹಿರಿಯ ಆಟಗಾರರುಗಳಾದ ವಾಸು, ರವಿ, ರಾಜೇಶ್, ಪ್ರದೀಪ್, ಚಿಣ್ಣಪ್ಪ ಪಾಲಾಕ್ಷ, ಪೀಟರ್ ಅವರುಗಳು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಉತ್ತಮ ತಂಡ ಬಹುಮಾನವನ್ನು ಅಮೇಟಿ ಎ ಗದ್ದೆಹಳ್ಳ ತಂಡ ಪಡೆದುಕೊಂಡರೆ, ಟಾಪ್ ಸ್ಕೋರರ್ ಬಹುಮಾನವನ್ನು ಅಮೇಟಿ ಬಿ ತಂಡದ ಮಸೂದ್ ಪಡೆದುಕೊಂಡರು. ಉತ್ತಮ ಆಟಗಾರ ಬಹುಮಾನವನ್ನು ಟೀಂ ಭಗವತಿ ತಂಡದ ರಂಗ ಪಡೆದುಕೊಂಡರು. ಉತ್ತಮ ಗೋಲ್‌ಕೀಪರ್ ಬಹುಮಾನವನ್ನು ಟೀಂ ಭಗವತಿಯ ಕೆವಿನ್ ಪಡೆದುಕೊಂಡರೆ, ಉದಯೋನ್ಮುಖ ಆಟಗಾರ ಬಹುಮಾನವನ್ನು ಎಂಸಿಸಿ ತಂಡದ ರಾಶಿಕ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಉಮೇಶ್ ಕುಮಾರ್, ಖಜಾಂಚಿ ಪ್ರಸನ್ನ, ಪದಾಧಿಕಾರಿಗಳಾದ ವಿವೇಕ್, ಸಚಿನ್ ವಾಸುದೇವ್, ಸೆಟ್ಟೆಜನ ಚಂದ್ರು, ಜಾಕ್, ಸುರ್ಜಿತ್, ಎಂಸಿಸಿ ಕ್ಲಬ್ ಉಪಾಧ್ಯಕ್ಷ ಕುಡೆಕಲ್ ಸಂತೋಷ್, ಸದಸ್ಯ ಅಶೋಕ್, ಬೆಂಜಮಿನ್ ಪ್ರಶಾಂತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net