ರಾಜ್ಯಮಟ್ಟಕ್ಕೆ ಆಯ್ಕೆ ಆದ ಕೊಡಗು ತಂಡ

foot bal
Published on

ಮಡಿಕೇರಿ:

ಪ್ರೌಢಶಾಲಾ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಕೊಡಗು ಜಿಲ್ಲಾ ತಂಡ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದೆ. ಅಮ್ಮತ್ತಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢಶಾಲಾ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಕೊಡಗು ಜಿಲ್ಲಾ ತಂಡ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ವಿಧಿತಾ ಗಳಿಸಿದ ಎಕೈಕ ಗೊಲು ಸಹಾಯದಿಂದ 1-0 ಗೋಲುಗಳ ಅಂತರದಲ್ಲಿ ಸೊಲಿಸಿ ಜಯ ಸಾಧಿಸಿತು. ಕೊಡಗು ತಂಡದ ಗೋಲ್ ಕೀಪರ್ ಖುಷಿ ತಂಗಮ್ಮ ಪಂದ್ಯದುದ್ದಕ್ಕೂ ಸಂಭವನಿಯ ಗೋಲುಗಳನ್ನು ತಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗೊಣಿಕೊಪ್ಪಲು ಲಯನ್ಸ್ ಶಾಲೆಯ ಶ್ರಾವ್ಯ, ಸೀತಮ್ಮ, ರಿಷಿಕಾ ಭೀಮಯ್ಯ, ಡಿ.ಜೆ.ವಂಶಿಕಾ, ಖುಷಿ ತಂಗಮ್ಮ, ಪೂಜಿತ, ತೃಷ, ಪರಿಣಿತಾ, ಹಾತೂರು ಪ್ರೌಢಶಾಲೆಯ ವಿದ್ಯಾ, ಸೋನಿ, ಭವ್ಯಾ, ಸಂತ ಜೊಸೆಫ್ ಪ್ರೌಢ ಶಾಲೆಯ ವಿಧಿತಾ, ಸೋನಶ್ರೀ, ರಿಫಾಮರಿಯಾಮ, ಪ್ರಣಿತ್ ಪೂವಮ್ಮ, ಪಿ.ಬಿ. ತನುಷಾ ಇಂಚರಾ ಲಯನ್ಸ್ ಪ್ರೌಢ ಶಾಲಾ ತಂಡದ ಪರವಾಗಿ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು. ತಂಡದ ತರಬೇತುದಾರರಾಗಿ ಲಯನ್ಸ್ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪಂದಿಕAಡ ನಾಗೇಶ್ ಭಾಗವಹಿಸಿದ್ದರು. ಲಯನ್ಸ್ ಶಾಲಾ ಮುಖ್ಯ ಶಿಕ್ಷಕಿ ಗಾನಾ ಸೇರಿದಂತೆ ಲಯನ್ಸ್ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಶಾಲಾ ತಂಡವ ಪಂದ್ಯಾಟದುದ್ದಕೂ ಪ್ರೋತ್ಸಾಹಿಸಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net