

ಬಾದಾಮಿ: ತಾಲೂಕಿನಾದ್ಯಂತ ಏ.26 ರಿಂದ ಜೂನ್ 9ರವರೆಗೆ 7ನೇ ಸುತ್ತಿನ ಕಾಲು-ಬಾಯಿ ಜ್ವರದ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಸುರೇಶ ಕೊಕ್ಕರೆ ತಿಳಿಸಿದರು.
ನಗರದ ಪಶು ಆಸ್ಪತ್ರೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ನಿರ್ವಹಣಾ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2ನೇ ಜಾನುವಾರು ಗಣತಿ ಪ್ರಕಾರ ತಾಲೂಕಿನಲ್ಲಿ 583 ಬ್ಲಾಕ್‌ಗಳಲ್ಲಿ 38455 ದನ ಹಾಗೂ 22730 ಎಮ್ಮೆ ಸೇರಿ ಒಟ್ಟು 61185 ಜಾನುವಾರುಗಳಿವೆ ಎಂದರು.
ರೈತರು ಪ್ರತಿಯೊಂದು ಜಾನುವಾರಿಗೆ ಲಸಿಕೆ ಹಾಕಿಸುವ ಮೂಲಕ ಕಾಲು ಮತ್ತು ಬಾಯಿ ಜ್ವರ ರೋಗದ ನಿರ್ಮೂಲನೆಗೆ ಸಹಕಾರ ನೀಡಬೇಕು ಎಂದರು.
ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀಕಾಂತ ಸಬನೀಸ ಇದ್ದರು.