ಕಾಲುಬಾಯಿ ರೋಗ ತಡೆಗೆ ಲಸಿಕೆ ಹಾಕಿಸಿ

30 KURUGODU 4
ಎಮ್ಮಿಗನೂರಿನ ಗ್ರಾಮದ ಇಂದಿರಾ ನಗರದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆ ಲಸಿಕೆ ಹಾಕಲಾಯಿತು. ಪಶು ವೈದ್ಯಾಧಿಕಾರಿ ಕೆ.ಬಸವರಾಜ, ಇಲಾಖೆಯ ವಿನಾಯಕ, ರಾಮಚಂದ್ರಪ್ಪ ಇತರರಿದ್ದರು.
Published on

ಕುರುಗೋಡು: ಜಾನುವಾರುಗಳ ಆರೋಗ್ಯ ದೃಷ್ಟಿಯಿಂದ ಕಾಲುಬಾಯಿ ರೋಗ ನಿಯಂತ್ರಿಸುವ ಲಸಿಕೆ ಹಾಕಿಸಬೇಕು ಎಂದು ಹಿರಿಯ ಪಶು ವೈದ್ಯಾಧಿಕಾರಿ ಕೆ.ಬಸವರಾಜ ಹೇಳಿದರು.

ಎಮ್ಮಿಗನೂರಿನ ಗ್ರಾಮದ ಇಂದಿರಾ ನಗರದಲ್ಲಿ 4ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೋಗ ಹರಡದಿರಲು ಮೂರು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು. 200ಕ್ಕೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು. ಇಲಾಖೆಯ ವಿನಾಯಕ, ರಾಮಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net