

ಕುರುಗೋಡು: ಪಶುಪಾಲನ ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ರಾಸುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ತಾಲೂಕು ಪಶು ವೈದ್ಯಾಧಿಕಾರಿ ಮೆರ್ಸಿ ಹೇಳಿದರು.
ಇದನ್ನೂ ಓದಿ:ಬೆಟ್ಟಂಪಾಡಿಯಲ್ಲಿ ಎನ್ನೆಸ್ಸೆಸ್ ವಿಶೇಷ ಶಿಬಿರ
ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಮಂಗಳವಾರ ಕಾಲುಬಾಯಿ ರೋಗ ನಿವಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮನುಷ್ಯರಂತೆ ಪ್ರಾಣಿಗಳಿಗೂ ವೈರಸ್, ಬ್ಯಾಕ್ಟೀರಿಯದಿಂದ ರೋಗ ಹರಡುತ್ತದೆ. ಬಾಯಿ, ಪಾದ, ಕೆಚ್ಚಲು, ಮೊಲೆ ತೊಟ್ಟಿನ ಮೇಲೆ ಗುಳ್ಳೆಗಳಾಗಿ ಸಿಡಿಯುವುದು ಕಾಲುಬಾಯಿ ರೋಗದ ಲಕ್ಷಣವಾಗಿದೆ. ಚಿಕಿತ್ಸೆ ಕೊಡಿಸುವುದರ ಮೂಲಕ ಈ ರೋಗವನ್ನು ವಾಸಿ ಮಾಡಬಹುದು ಎಂದರು.
ಸಹಾಯಕ ಪ್ರಾಧ್ಯಾಪಕ ಮಂಜುನಾಥ ಸ್ವಾಮಿ ಮಾತನಾಡಿ, ಶಿಸ್ತುಬದ್ಧ ನೈತಿಕ ಜೀವನದ ಮೌಲ್ಯಗಳನ್ನು ಕಲಿಯಲು ಶಿಬಿರ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.