ಆಹಾರ ಪೂರೈಕೆ ಸಂಸ್ಥೆಗೆ 30 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾನಿಲಯದ ಜ್ಞಾನ ಸಂಗಮ ಕ್ಯಾಂಪಸ್ ವಿದ್ಯಾರ್ಥಿಳಿಗೆ ಆಹಾರ ಪೂರೈಸುವ ಮೆಸ್‌ನ ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿಯೊಬ್ಬರಿಗೆ ಅವರ ಮ್ಯಾನೇಜರ್ ಹಾಗೂ ಇತರ ಇಬ್ಬರು ಸೇರಿ ಸುಮಾರು 30 ಲಕ್ಷ ರೂ. ವಂಚಿಸಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮರೋಳಿಯಲ್ಲಿ ಸಂಸ್ಥೆ ಹೊಂದಿರುವ ಬಿ.ಸಚ್ಚಿದಾನಂದ ಶೆಟ್ಟಿ ವಂಚನೆಗೆ ಒಳಗಾಗಿರುವವರು. ಅವರು 2022ರ ಜ.1ರಿಂದ ಡಿ.31ರ ವರೆಗೆ ಮೆಸ್‌ಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿದ್ದರು. ತಮ್ಮದೇ ಸಂಸ್ಥೆಯ ಸಿಬಂದಿಯಾಗಿದ್ದ ಜಗದೀಶ್ ಕೃಷ್ಣ ಶೆಟ್ಟಿ ಎಂಬಂತಾನನ್ನು ಮ್ಯಾನೇಜರ್ ಆಗಿ ನೇಮಿಸಿ ಅಲ್ಲಿನ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಆತ ಅಕಿಂತಾ ಆನಂದ ವುಸ್ಲಕರ್ ಎಂಬಾಕೆಯನ್ನು ಅಕೌಟೆಂಟ್ ಮತ್ತು ಬಾಬು ದಳ್ವಾಯಿ ಎಂಬುವನ್ನನು ಸಹಾಯಕನನ್ನಾಗಿ ಇಟ್ಟುಕೊಂಡಿದ್ದ.


ಈ ನಡುವೆ ಮೆಸ್ ಬಿಲ್ ನೇರವಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವಂತೆ ವಿಟಿಯು ಆದೇಶಿದ್ದು, ಅದರಂತೆ ಸಚ್ಚಿದಾನಂದ ಶೆಟ್ಟಿ ಅವರು ತಮ್ಮ ಖಾತೆಗೆ ಲಿಂಕ್ ಆಗಿರುವ ಪಿಒಎಸ್ ಮತ್ತು ಯುಪಿಐ ಮೆಷಿನ್ ಮೆಸ್‌ನಲ್ಲಿ ಅಳವಡಿದ್ದರು.


ಆದರೆ ಒಂದನೇ ಆರೋಪಿ ಜಗದೀಶ ಕೃಷ್ಣ ಅದನ್ನು ಬದಲಿಸಿ, ತನ್ನ ಖಾತೆ ಲಿಂಕ್ ಆಗಿರುವ ಮೆಷಿನ್ ಅಳವಡಿಸಿ 6, 83, 175 ರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಎರಡನೇ ಆರೋಪಿ ಅಕಿಂತಾ ವಿದ್ಯಾರ್ಥಿಗಳಿಂದ 10,48,337ರೂ. ಮತ್ತು ಮೂರನೇ ಆರೋಪಿ ಬಾಬು 52,622 ರೂ. ವರ್ಗಾಯಿಸಿಕೊಂಡಿದ್ದಾರೆ. ಇದಲ್ಲದೆ ಮೆಸ್ ಕೆಲಸಗಾರರಿಗೆ ಸರಿಯಾಗಿ ವೇತನ ನೀಡಿಲ್ಲ. ಜತೆಗೆ ಸಂಸ್ಥೆಯ ಹೆಸರಿನಲ್ಲಿ ಸಾಲವಾಗಿ ದಿನಸಿ ಸಾಮಗ್ರಿಗಳನ್ನು ಪಡೆದಿರುವುದು ಸೇರಿ ಒಟ್ಟು 30 ಲಕ್ಷ ರೂ. ನಷ್ಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net