ಆರೋಗ್ಯಕರ ಜೀವನಕ್ಕೆ ಉತ್ತಮ ಆಹಾರ ಅಗತ್ಯ, ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ

IMG_20231006_204203_941-1.jpg
Published on

ಹುಬ್ಬಳ್ಳಿ: ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಶುಕ್ರವಾರ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಸೇವಿಸುವ ಆಹಾರ ಪದಾರ್ಥಗಳು ಗುಣಮಟ್ಟದ್ದಾಗಿರಬೇಕು. ಹೊಲದಲ್ಲಿ ಬೆಳೆದ ಜವಾರಿ ಪದಾರ್ಥಗಳನ್ನೇ ಇಂದು ಬಹಳಷ್ಟು ಜನರು ಕೇಳಿ ಪಡೆಯುತ್ತಿದ್ದಾರೆ. ಇದೇ ರೀತಿ ದೇಶದ ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿಯು ಒಳ್ಳೆಯದು ಎಂದರು.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಿಲ್ಲೆಟ್ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಯುವ ಪೀಳಿಗೆಯು ಪಿಜ್ಜಾ, ಬರ್ಗರ್ ನಂತಹ ಪದಾರ್ಥಗಳಿಗೆ ಮೊರೆ ಹೋಗದೇ ಆರೋಗ್ಯದತ್ತ ಗಮನ ಹರಿಸಬೇಕು ಎಂದರು.

ತರಬೇತಿ ಕೇಂದ್ರದಲ್ಲಿ ಬೆಳಗಿನಿಂದ ಸಂಜೆಯವರೆಗೂ ನೂರಕ್ಕೂ ಹೆಚ್ಚು ಜನ ತರಬೇತಿ ಪಡೆದರು ಎಂದು ಸಂಘಟಕರು ತಿಳಿಸಿದ್ದಾರೆ.

ಪಿಎಸ್ಐ ಮಲ್ಲಿಕಾರ್ಜುನ ಹೊಸೂರ, ಕೇಂದ್ರದ ಮುಖ್ಯಸ್ಥ ರಾಜೀವ್ ಶೆಟ್ಟಿ ಕುಂದಾಪುರ, ಪ್ರಾಧಿಕಾರದ ನಿರ್ದೇಶಕರಾದ ಭಾರತಿ ಸಂಗೊಳ್ಳಿ, ಡಾ. ರಂಜನಾ, ಸೋಮಲಿಂಗಪ್ಪ ಸಂಗೊಳ್ಳಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net