ಅನ್ನದಾತರು, ಸೈನಿಕರನ್ನು ಗೌರವಿಸಬೇಕು

19GKK3
Published on

ಗೋಕಾಕ: ರೈತರು ಹಾಗೂ ಸೈನಿಕರು, ಶಿಕರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ದೇಶದ ಬೆನ್ನೆಲುಬಾದ ಅನ್ನದಾತರಿಗೆ ಎಲ್ಲರೂ ಗೌರವ ನೀಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ತಮ್ಮ ಗಹಕಚೇರಿ ಆವರಣದಲ್ಲಿ ಕೃಷಿ ಇಲಾಖೆ ಸಹಾಯಧನದಲ್ಲಿ ನೇಗಿಲು, ರೋಟವೇಟರ್​, ಪವರ್​ ಟಿಲ್ಲರ್​, ರವದಿ ಕಟಾವು ಯಂತ್ರ ಇತ್ಯಾದಿಗಳನ್ನು ರೈತ ಲಾನುಭವಿಗಳಿಗೆ ಶನಿವಾರ ವಿತರಿಸಿ ಮಾತನಾಡಿದರು.

ರೈತರು ಕೃಷಿ ಯಂತ್ರೋಪಕರಣ ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಅಧಿಕಾರಿಗಳ ಸಲಹೆ ಪಡೆದು ಹೆಚ್ಚಿನ ಇಳುವರಿ ಪಡೆದು ಆರ್ಥಿಕ ಸಬಲರಾಗುವಂತೆ ತಿಳಿಸಿದರು.

ತಾಲೂಕಿನ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮತ್ತು ಕಷಿ ಯಂತ್ರೋಪಕರಣ ಪೂರೈಸಲಾಗುತ್ತಿದೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧ ಎಂದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಎಚ್​.ಡಿ. ಕೋಳೇಕರ ಮಾತನಾಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕುಗಳು ಶೇ. 100 ನೀರಾವರಿ ಪ್ರದೇಶ ಇರುವುದರಿಂದ ಹೆಚ್ಚು ಕಬ್ಬು, ಗೋವಿನ ಜೋಳ ಮತ್ತು ಅರಿಶಿನ ಬೆಳೆಯಲಾಗುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಟಿ.ಆರ್​. ಕಾಗಲ, ಭೀಮಗೌಡ ಪೊಲೀಸಗೌಡರ, ಸುರೇಶ ಸನದಿ, ಅಶೋಕ ಗೋಣಿ, ಕಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ. ನದ್​ಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net