

ಬೆಳಗಾವಿ: ವಿಷಾಹಾರ ಸೇವಿಸಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ 38 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ ಆಗಿರುವ ಘಟನೆ ನಡೆದಿದ್ದು ಸದ್ಯ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಬೈಲಹೊಂಗಲ ಎಸಿ ಪ್ರಭಾವತಿ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿರುವ ಶಾಲೆಯಲ್ಲಿ ವಿಷಾಹಾರ ಸೇವಿಸಿ ವಾಂತಿ-ಬೇಧಿಯಿಂದ 38 ವಿದ್ಯಾರ್ಥಿಗಳು ಬಳಲುತ್ತಿದ್ದರು. ಗುರುವಾರ ರಾತ್ರಿ ಪನ್ನೀರ್ ಹಾಗೂ ಚಿಕನ್ ಊಟ ಸವಿದಿದ್ದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಇತ್ತ ಅಸ್ತವ್ಯಸ್ತಗೊಂಡ ವಿದ್ಯಾರ್ಥಿಗಳಿಗೆ ಸಂಗೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಬೈಲಹೊಂಗಲ ಎಸಿ ಪ್ರಭಾವತಿ ಫಕೀರಪುರ, ತಹಶಿಲ್ದಾರ ಜೆ.ಸಿ ಅಷ್ಠಗಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಊಟದ ವ್ಯವಸ್ಥಾಪಕರು, ಪ್ರಾಚಾರ್ಯರ ತರಾಟೆಗೆ ತೆಗೆದುಕೊಂಡ ಎಸಿ ಪ್ರಭಾವತಿ ಸೂಕ್ತ ಕ್ರಮಕೈಗೊಳ್ಳಯವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಊಟದ ವ್ಯವಸ್ಥಾಪಕನ ವಿರುದ್ಧ ಸಂಗೋಳ್ಳಿ ರಾಯಣ್ಣ ಸೈನಿಕ ಶಾಲೆಯ ಕಮಿಷನರ್ ಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.