ಆಹಾರ ನಿರೀಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯ

4
Published on

ಹುಕ್ಕೇರಿ: ತಾಲೂಕಿನ ಯಮಕನಮರಡಿ ಹೋಬಳಿಯ ಆಹಾರ ನಿರೀಕ್ಷಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಅರೋಪಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದರು.

ಪಟ್ಟಣದ ಮಿನಿ ವಿಧಾನಸೌಧ ಬಳಿ ಜಮಾಯಿಸಿದ ದಲಿತ ಸಂಘಟನೆ ಕಾರ್ಯಕರ್ತರು, ಹುಕ್ಕೇರಿ ಆಹಾರ ಇಲಾಖೆಯಲ್ಲಿ ನಿಯೋಜನೆ ಮೇಲೆ ಇರುವ ಯಮಕನಮರಡಿ ಹೋಬಳಿಯ ಆಹಾರ ನಿರೀಕ್ಷಕ ಶಬ್ಬೀರ್ ಮುಜಾವರ್ ಅವರು ಎಸ್ಸಿ, ಎಸ್ಟಿ ಮುಖಂಡರಿಗೆ ಏಕವಚನದಲ್ಲಿ ಸಂಭೋದಿಸಿ ದುರ್ವತನೆ ತೋರುತಿದ್ದಾರೆ. ಯಮಕನಮರಡಿ ವ್ಯಾಪ್ತಿಯಲ್ಲಿ ಗ್ರಾಹಕರಿಂದ ಹಣ ಪಡೆದು ಹಂಚಿಕೆ ಮಾಡಲಾದ 270 ಕ್ಕೂ ಹೆಚ್ಚು ಆದ್ಯತಾ ಪಡಿತರ (ಬಿಪಿಎಲ್) ಕಾರ್ಡ್‌ಗಳ ಮಂಜೂರಾತಿಯಲ್ಲಿ ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿದರು.

ಯಮಕನಮರಡಿ ಹೋಬಳಿಗೆ ನಿಯೋಜನೆಗೊಂಡಿದ್ದರೂ ಹುಕ್ಕೇರಿ ಹೋಬಳಿ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಮಾಡಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಹೊಸ ಕಾರ್ಡ್ ಹಂಚಿಕೆಯನ್ನು ಕಚೇರಿಯಲ್ಲಿ ನಿರ್ವಹಿಸದೆ ಪಟ್ಟಣದ ಖಾಸಗಿ ಸೆಂಟರ್‌ಗಳಲ್ಲಿ ಮಾಡುತ್ತಿರುವುದು ಕಂಡುಬಂದಿದೆ. ಈ ಅಧಿಕಾರಿಯನ್ನು ಕೂಡಲೇ ಬೇರೆಡೆ ವರ್ಗಾಯಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಮುಖಂಡರಾದ ಕೆಂಪಣ್ಣ ಶಿರಹಟ್ಟಿ, ಸತೀಶ ದಿನ್ನಿಮನಿ, ಶಂಕರ ಕಟ್ಟಿಮನಿ, ಕಿರಣ ಬಾಗೇವಾಡಿ, ರಾಜು ಮೂಥಾ, ಮಹೇಶ ಮಾಳಗೆ, ಅರುಣ ಬೆಳವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net