ಕಳಪೆ ಆಹಾರಧಾನ್ಯ ಪತ್ತೆ: ಹೂಡಿ ಗೋದಾಮಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ

Hoodi Godamu
Published on

ಕೆ.ಆರ್. ಪುರ: ಮಹದೇವಪುರದ ಹೂಡಿಯಲ್ಲಿರುವ ಆಹಾರ ಇಲಾಖೆಯ ಗೋದಾಮಿನಲ್ಲಿ ಒಂದು ಲಾರಿ ಲೋಡ್ ಕಳಪೆ ಆಹಾರ ಧಾನ್ಯ ಪತ್ತೆಯಾಗಿದೆ. ಆಹಾರ ಸಚಿವ ಕೆ. ಗೋಪಾಲಯ್ಯ ಶುಕ್ರವಾರ ಗೋದಾಮಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅವ್ಯವಹಾರ ಬೆಳಕಿಗೆ ಬಂದಿದ್ದು, ಕಳಪೆ ಧಾನ್ಯ ಸರಬರಾಜು ಮಾಡಿದ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಗ್ರಾಹಕರಿಗೆ ವಿತರಿಸುವ ಆಹಾರಧಾನ್ಯ ಗಳಲ್ಲಿ ಕಳಪೆಯಾಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಗೋದಾಮಿಗೆ ಬಂದಿದ್ದ 6 ಲಾರಿಗಳ ಪೈಕಿ ಒಂದು ಲಾರಿಯಲ್ಲಿ ಕಳಪೆ ಮಟ್ಟದ ಆಹಾರ ಧಾನ್ಯಗಳಿರುವುದು ಕಂಡು ಬಂದಿದೆ. ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಇದೇ ರೀತಿ ಕಳಪೆ ಆಹಾರ ಧಾನ್ಯ ಪತ್ತೆಯಾಗಿತ್ತು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ನಗರ ಜಿಲ್ಲಾ ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಗಿರಿಜಾ ದೇವಿ, ಪೂರ್ವ ತಾಲೂಕು ಆಹಾರ ನಿರೀಕ್ಷಕ ರಾಜಪ್ಪ, ಶ್ಯಾಮಲಾದೇವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net