

ಮಂಡ್ಯ: ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ವರನಟ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಫುಡ್‌ಕಿಟ್ ವಿತರಣೆ ಮಾಡಲಾಯಿತು.
ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದಿರುವುದಕ್ಕೆ ಸಾರ್ಥಕತೆ ಕಾಣಲು ಸಾಧ್ಯವಿದೆ. ಇನ್ನೊಬ್ಬರಿಗೆ ನೆರವಾಗುವುದು, ಅಗತ್ಯವುಳ್ಳವರಿಗೆ ಸಹಾಯ ಮಾಡುವುದು ಮಾನವೀಯ ಧರ್ಮ. ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನೇ ದೇವರೆಂದು ಕರೆದರು. ಇಂತಹ ಪುಣ್ಯಾತ್ಮ ಇನ್ನೂ ಬದುಕಬೇಕಿತ್ತು. ಅಭಿಮಾನಿಗಳ ದೇವರು ಡಾ.ರಾಜ್ ಹೆಸರಿನಲ್ಲಿ ನಾವು ಸೇವಾ ಕಾರ್ಯ ಮಾಡಿ ಪುಣ್ಯಾತ್ಮರನ್ನು ಸ್ಮರಿಸುತಿದ್ದೇವೆ ಎಂದು ನುಡಿದರು.
ಅಭಿಮಾನಿಗಳಾದ ಬಸವೇಗೌಡ, ನಿವೃತ್ತ ಅಧಿಕಾರಿ ಸಿದ್ದಪ್ಪ, ಎಂ.ಆರ್.ರಘು, ಪಾಪಣ್ಣ, ತಿಲಕ್ , ಬಸವರಾಜ್, ಚಿರಂಜೀವಿ, ರಾಜಣ್ಣ, ವೆಂಕಟೇಶ್ ಇತರರಿದ್ದರು.