ಆಹಾರ ಉದ್ಯಮಕ್ಕೆ ಬೇಕು ಭದ್ರತೆ: ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ (ಜಿ.ಕೆ.ಶೆಟ್ಟಿ) ಅಭಿಮತ

Most-6
Published on

ಮೈಸೂರು: ಆಹಾರ ಉದ್ಯಮಕ್ಕೆ ಸರ್ಕಾರದಿಂದ ಭದ್ರತೆ ಬೇಕು ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ (ಜಿ.ಕೆ.ಶೆಟ್ಟಿ) ಅಭಿಪ್ರಾಯಪಟ್ಟರು.
ನಗರದ ಕೃಷ್ಣಮೂರ್ತಿಪುರಂನಲ್ಲಿ ಮೈಸೂರು ಹೋಟೆಲ್ ಮಾಲೀಕರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಅತಿಥಿ ದೇವೋಭವ ಎನ್ನುವ ಧ್ಯೇಯದೊಂದಿಗೆ ನಡೆಯುತ್ತಿರುವ ಉದ್ಯಮಕ್ಕೆ ಸರ್ಕಾರದ ಭದ್ರತೆ ಬಹಳ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಜಿಲ್ಲಾ ಹಾಗೂ ತಾಲೂಕು ಸಂಘಗಳು ಕೆಲಸಗಳು ಮಾಡಬೇಕಾಗುತ್ತದೆ ಎಂದರು.
ಒಗ್ಗಟ್ಟಿನಿಂದ ಸಂಘಟನೆ ಕಟ್ಟಬೇಕಾಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದ್ದರೆ, ಸಂಘಟನೆಯಲ್ಲಿ ಶಕ್ತಿ ಇರುತ್ತದೆ ಎನ್ನುವುದನ್ನ್ನು ಮರೆಯಬಾದರು. ರಾಜ್ಯ ಸಂಘ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಇನ್ನು ಬೇಕಾದಷ್ಟು ಮಾಡುವ ಕೆಲಸಗಳು ಬಾಕಿಯಿದೆ. ಎಲ್ಲರೂ ಸೇರಿ ಸರ್ಕಾರದ ಹಲವು ಇಲಾಖೆಯ ವಿವಿಧ ರೀತಿಯ ಕಾನೂನುಗಳು ತಿದ್ದುಪಡಿ ಆಗಬೇಕಾಗಿದೆ. ಕೆಲಸವನ್ನು ಒತ್ತಡ ತಂದು ಮಾಡಿಸೋಣ ಎಂದು ಹೇಳಿದರು.
ಮೈಸೂರು ಜಿಲ್ಲೆಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷರಾದ ಮಧುಕರ್ ಎಂ.ಶೆಟ್ಟಿ. ರವಿಶಾಸ್ತ್ರಿ, ರಾಜ್ಯ ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಎಂ.ರಾಜೇಂದ್ರ, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಮೈಸೂರು ಹೋಟೆಲ್ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎನ್.ವಿ.ಹೆಗಡೆ, ಉಪಾಧ್ಯಕ್ಷ ಉಗ್ರಯ್ಯ, ಕಾರ್ಯದರ್ಶಿ ಎ.ಆರ್.ರವೀಂದ್ರ ಭಟ್, ಮಹಾಲಕ್ಷ್ಮಿಸ್ವೀಟ್ಸ್ ಮಾಲೀಕ ಶಿವಕುಮಾರ್, ಪ್ರಮುಖರಾದ ಕೆ.ಪ್ರಕಾಶ್ ಶೆಟ್ಟಿ, ಆರ್.ಸುಬ್ರಮಣ್ಯತಂತ್ರಿ, ಕೆ.ಭಾಸ್ಕರ್ ಶೆಟ್ಟಿ, ಸತೀಶ್ ಪಾಂಡುರಂಗ, ಪ್ರಭಾಕರ್, ಆನಂದಶೆಟ್ಟಿ, ಜಿ.ಅಶೋಕ್, ಅನಿಲಕುಮಾರ್, ಮಹೇಶ್ ಕಾಮತ್, ಹೇಮಂತ್‌ಕುಮಾರ್, ಸುಜಿತ್ ಕುಮಾರ್, ರಾಮ್ಮೋಹನ್, ಪಿ.ಎನ್.ಕುಂದರ್, ಎ.ಎಸ್.ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net