ಆಶ್ರಮವಾಸಿಗಳಿಗೆ ಅನ್ನದಾನ

Food for Ashram residents
Published on

ಮಡಿಕೇರಿ:

ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗ ಪ್ರತಿ ತಿಂಗಳ ಕೊನೆಯ ಭಾನುವಾರ ಆಶ್ರಮದಲ್ಲಿರುವ ನೊಂದ ಹಿರಿಯರಿಗೆ ಅನ್ನದಾನ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಮಡಿಕೇರಿಯ ತನಲ್, ವಿಕಾಸ್ ಹಾಗೂ ಶಿವದೂತ ಆಶ್ರಮದಲ್ಲಿ ಅನ್ನದಾನ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಬಳಗದ ಕಾರ್ಯದರ್ಶಿ ಎಂ.ಎ. ಅಬ್ದುಲ್ ರಜಾಕ್, ಸದಸ್ಯ ನಾಬಿನ್ ಕೆವಿನ್ ಇತ್ತೀಚೆಗೆ ನಿಧನರಾದ ಹಿನ್ನೆಲೆ ರಸಮಂಜರಿ ಕಾರ್ಯಕ್ರಮ ರದ್ದುಪಡಿಸಲಾಗಿತ್ತು.

ಪ್ರತಿ ತಿಂಗಳ ಕೊನೆಯ ಭಾನುವಾರ ನೊಂದವರೊAದಿಗೆ ಬೆರೆತು ಮನಸ್ಸಿಗೆ ಕೊಂಚ ನೆಮ್ಮದಿ ನೀಡುವ ಅಳಿಲು ಸೇವೆಯಲ್ಲಿ ಬಳಗ ತೊಡಗಿಸಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಬಳಗದ ಅಧ್ಯಕ್ಷ ಮಹಮ್ಮದ್ ಅಲಿ, ಉಪಾಧ್ಯಕ್ಷ ಸುಲೈಮಾನ್, ಖಜಾಂಚಿ ಶಿವಣ್ಣ, ಸದಸ್ಯ ಗಿಲ್ಬರ್ಟ್ ಮತ್ತಿತರರು ಉಪಸ್ಥಿತರಿದ್ದರು. ನಾಬಿನ್ ಕೆವಿನ್ ನಿಧನಕ್ಕೆ ಬಳಗದ ಪ್ರಮುಖರು ಹಾಗೂ ಆಶ್ರಮವಾಸಿಗಳು ಇದೇ ಸಂದರ್ಭ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net