ಆಗಸ್ಟ್ 3 ರಂದು ಬಿ.ಸಿ.ರೋಡಿನಲ್ಲಿ ಆಹಾರ ಮೇಳ

Btw_food fest
Published on

ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕ ಆಶ್ರಯದಲ್ಲಿ ಬಂಟವಾಳದ ಬೃಹತ್ ಆಹಾರ ಮೇಳ ಹಾಗೂ ಹಲಸಿನ ಹಬ್ಬ ಆಗಸ್ಟ್ 3, 4ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ.

ಎರಡು ದಿನ ನಡೆಯಲಿರುವ ಹಲಸು, ಮಾವು, ಹಾಗೂ ಹಲವು ಬಗೆಯ ಹಣ್ಣುಗಳ ವೈವಿಧ್ಯಮಯ ಆಹಾರೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹಲಸು, ಮಾವು, ರಾಂಬೂಟನ್, ಡ್ರಾಗನ್ ಫ್ರೂಟ್ ಸೇರಿದಂತೆ ವಿವಿಧ ಬಗೆಯ ಸಕಾಲಿಕ ಹಣ್ಣುಗಳ ಮಾರಾಟ ವ್ಯವಸ್ಥೆ ಇದ್ದು ಹಲವು ಬಗೆಯ ಹಣ್ಣಿನ ಗಿಡಗಳ, ತೋಟಗಾರಿಕಾ ಬೆಳೆಗಳ ಮಾಹಿತಿ ಸಂಪನ್ಮೂಲ ವ್ಯಕ್ತಿಗಳಿಂದ ನೀಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಗೋಷ್ಟಿಗಳು ನಡೆಯಲಿದೆ.

3ರಂದು ಬೆಳಗ್ಗೆ 10ಕ್ಕೆ ಚಿತ್ರಾ ಕುಮಾರ್ ಉದ್ಘಾಟಿಸುವರು, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷ ಆದಿರಾಜ್ ಜೈನ್ ಅಧ್ಯಕ್ಷತೆ ವಹಿಸುವರು, ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ, ಸಂಜೀವ ಪೂಜಾರಿ ಉಪಸ್ಥಿತರಿರುವರು. ಅಶಕ್ತರಿಗೆ ಸಹಾಯಧನ ಡಾ.ಕೆ.ಅರವಿಂದ ರಾವ್, ಕಿಶೋರ್ ಫರ್ನಾಂಡೀಸ್ ವಿತರಿಸುವರು. ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ಬಿ.ರಮಾನಾಥ ರೈ ಭಾಗವಹಿಸುವರು ಎಂದು ಅಧ್ಯಕ್ಷ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net