

ಹುಬ್ಬಳ್ಳಿ: ಪಂಚಾಮೃತ ಡೀಲಕ್ಸ್ ವತಿಯಿಂದ ದೀಪಾವಳಿ ಹಿನ್ನೆಲೆಯಲ್ಲಿ ಫುಡ್ ಫ್ಯಾಷನ್ ಟ್ರೆಂಡ್ಸ್ ಪ್ರದರ್ಶನ ಮೇಳವನ್ನು ಅ. 19ರಿಂದ ಎರಡು ದಿನಗಳ ವರೆಗೆ ಇಲ್ಲಿಯ ಕೊಯಿನ್ ರಸ್ತೆ ಲಕ್ಷ್ಮೀ ಮಾಲ್ ನಲ್ಲಿ ಆಯೋಜಿಸಲಾಗಿದೆ.
60ಕ್ಕೂ ಹೆಚ್ಚು ಶಾಪಿಂಗ್ ಸ್ಟಾಲ್, 10ಕ್ಕೂ ಅಧಿಕ ಆಹಾರ ಮಳಿಗೆಗಳು ತೆರೆಯಲಿದ್ದು, ಬಟ್ಟೆಯಿಂದ ಹಿಡಿದು ಆಭರಣಗಳು, ದೀಪಾವಳಿ ಉಡುಗೊರೆಗಳು, ದೀಪಗಳು ಹೀಗೆ ಎಲ್ಲ ವಸ್ತುಗಳು ಲಭ್ಯವಾಗಲಿವೆ.
ಒನ್ ಸ್ಟಾಪ್, ಈಟ್ ಆಂಡ್ ಶಾಪ್ ಎಕ್ಸಪೋ ಇದಾಗಿದ್ದು, ಮನೋರಂಜನೆ ಜತೆಗೆ ಶಾಪಿಂಗ್ ಮಾಡಬಹುದು.
ಉಚಿತ ಪ್ರವೇಶವಿದ್ದು, ಮಕ್ಕಳು, ವಯಸ್ಕರು ಎಲ್ಲ ವಯೋಮಾನದವರು ಎರಡು ದಿನದ ಶಾಪಿಂಗ್ ಹಬ್ಬದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.