

ಕುಶಾಲನಗರ: ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಜಾನಪದ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳು ದೇಶಿ ಆಹಾರ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟದ ಆಹಾರ ಮೇಳ ಗುರುವಾರ ನಡೆಯಿತು.
ಆಹಾರ ಮೇಳವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಕೆ.ಕೆ.ಚೇತನ್ ಚಾಲನೆ ನೀಡಿ ಮಾತನಾಡಿ, ಇದೊಂದು ಮಕ್ಕಳಲ್ಲಿ ಅಡಗಿರುವ ಅಡುಗೆಯ ಪ್ರತಿಭೆ ಹಾಗೂ ವ್ಯಾಪಾರದ ಕಾಳಜಿಯ ಬಗ್ಗೆ ಅರಿವು ಮೂಡಲು ಅವಕಾಶವಾಗಿದೆ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಪೊನ್ನಟ್ಟಿ ಮಾತನಾಡಿ, ಮಕ್ಕಳೇ ತಾವೇ ತಯಾರಿಸಿ ತಂದಿರುವ ಆಹಾರವನ್ನು ವ್ಯಾಪಾರ ಮಾಡುವ ಮೂಲಕ ವ್ಯಾಪಾರದ ಬಗ್ಗೆ ಮುತುವರ್ಜಿ ಮತ್ತು ವ್ಯಾಪಾರದ ಅರಿವು ಮೂಡಲು ಸಾದ್ಯವಾಗಲಿದೆ ಎಂದರು.
ಕಾರ್ಯಕ್ಷಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಎಂ.ಪ್ರವೀಣ್ ಕುಮಾರ್ ವಹಿಸಿದ್ದರು. ಈ ಆಹಾರ ಮೇಳದಲ್ಲಿ ಸುಮಾರು ೯ ತಂಡಗಳು ಭಾಗವಹಿಸಿದ್ದವು.
ಮಕ್ಕಳು ತಾವೇ ತಯಾರಿಸಿದ ಮುದ್ದೆಲ, ಸಾಂಬಾರು, ಬಿರಿಯಾನಿ, ಪಲಾವ್, ಐಸ್ ಕ್ರೀಂ, ಸಲಾಡ್, ಪಾಯಸ, ಸಿಹಿಬತಿಂಡಿಗಳು, ಜ್ಯೂಸ್ ಸೇರಿದಂತೆ ವಿವಿಧ ಬಗೆಯ ಮಾಂಸಹಾರ ಮತ್ತು ಸಸ್ಯಹಾರ ತಿನಿಸುಗಳನ್ನು ಮಾಡಿ ಮಾರಾಟ ಮಾಡಿ ಸಂತೋಷಪಟ್ಟರು. ಅಲ್ಲದೇ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಖರೀದಿ ಮಾಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪುಟ್ಟರಾಜು, ಸಾಂಸ್ಕೃತಿಕ ಸಂಚಾಲಕ ಸುಧಾಕರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಮೇಶ್ ಚಂದ್ರ, ಸಹ ಪ್ರಾಧ್ಯಾಪಕರಾದ ಸುನಿಲ್ ಕುಮಾರ್, ಕುಸುಮ, ಪಿ.ಪಿ.ಜಯಂತಿ, ರಶ್ಮಿ, ಆಯಿಶಾ ಸಿದ್ಧಿಖ, ವಂದನ, ಮಧುಶ್ರೀ, ಮನೋಜ್, ಗಿರೀಶ್, ಸಿದ್ದಪ್ಪಾಜಿ, ಚರಣ್ ರಾಜ್, ಸಿದ್ದರಾಮಯ್ಯ, ಮಹದೇವ, ತೇಜಶ್ವಿನಿ, ಸೂರ್ಯಕುಮಾರ್ ಸೇರಿದಂತೆ ಹಲವರು ಇದ್ದರು.
ಬಹುಮಾನ ವಿಜೇತರು: ಪ್ರಥಮ ಬಹುಮಾನವನ್ನು ದ್ವಿತೀಯ ಬಿಸಿಎ ತಂಡ ಪಡೆದುಕೊಂಡಿತು. ತೃತೀಯ ಬಿಸಿಎ ಮತ್ತು ತೃತೀಯ ಬಿಕಾಂ ದ್ವಿತೀಯ ಬಹುಮಾನ ಪಡೆದರೆ ತೃತೀಯ ಬಿಎ ಮತ್ತು ತೃತೀಯ ಬಿಬಿಎ ತೃತೀ ಬಹುಮಾನ ಪಡೆದುಕೊಂಡಿತು. ಉಳಿದ ತಂಡಕ್ಕೆ ಸಮಾದಾನಕರ ಬಹುಮಾನ ಪಡೆದುಕೊಂಡರು.