

ಹುಬ್ಬಳ್ಳಿ: ಹನುಮ ಜಯಂತಿ ನಿಮಿತ್ತ ವಿಎಕೆ ಫೌಂಡೇಷನ್ ವತಿಯಿಂದ ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲನಿಯಲ್ಲಿ ಶನಿವಾರ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾವೆ, ನಾವೆಲ್ಲರೂ ಹನುಮನ ಭಕ್ತಿ ಮತ್ತು ಶಕ್ತಿಯಿಂದ ಪ್ರೇರಣೆ ಪಡೆಯಬೇಕು. ದುಶ್ಚಟಗಳಿಂದ ದೂರವಾಗಿ ಶಕ್ತಿಶಾಲಿ ಮತ್ತು ಸಮರ್ಥಶಾಲಿಗಳಾಗಬೇಕು ಎಂದು ಯುವಕರಿಗೆ ತಿಳಿವಳಿಕೆ ನೀಡಿದರು. ನಂತರ ಅನ್ನ ಸಂತರ್ಪಣೆ ಜರುಗಿತು.
ಪ್ರಮುಖರಾದ ತೋಟಪ್ಪ ನಿಡಗುಂದಿ, ಮಂಜು ಕಾಟಕರ, ಸಹದೇವ ದೊಡ್ಡಮನಿ, ಮಂಜುನಾಥ ಕಾನನ, ಶ್ಯಾಮ ಕಾನನ, ಪ್ರಕಾಶ ವಂಟಮನಿ, ಗಣೇಶ ಪೂಜಾರ, ರಾಮ ದಿಂಡಿ, ಕರಣ ದಿಂಡಿ, ಅಜೇಯ, ಅಭಿನಂದನ ಉಪಸ್ಥಿತರಿದ್ದರು.