ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಅನ್ನದಾನ

20 ckm 7
ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದಿAದ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಇಂದಾವರದ ವೃದ್ಧಾಶ್ರಮದಲ್ಲಿ ಅನ್ನದಾನ ನಡೆಸಲಾಯಿತು. ಸಿ.ಎನ್.ವೆಂಕಟೇಶ್, ಕೆ.ಎಲ್.ದಿನೇಶ್, ನದೀಮ್ ಪಾಶ, ರೇಣುಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅನ್ನದಾನ ಮಹಾಪ್ರಸಾದವಿದ್ಧಂತೆ. ಕಿರಿಯರ ಅಳಿಲು ಸೇವೆ, ಹಿರಿಯರ ಮನಸ್ಸು ಸಂತೋಷಿಸಿ ಹಾರೈಸಿದಾಗ ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸಿ.ಎನ್.ವೆಂಕಟೇಶ್ ತಿಳಿಸಿದರು.

ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ೧೮೫ನೇ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದಿAದ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಇಂದಾವರ ಸಮೀಪ ವೃದ್ದಾಶ್ರಮಕ್ಕೆ ಊಟೋಪಾಚಾರ ವ್ಯವಸ್ಥೆ ಕಲ್ಪಿಸಿ ಮಾತನಾಡಿದರು.
ಪ್ರತಿವರ್ಷದಂತೆ ಛಾಯಾಗ್ರಾಹಕ ದಿನಾಚರಣೆಯಂದು ವೃದ್ದಾಶ್ರಮಕ್ಕೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟದಾನ ಅನ್ನದಾನ. ಇತರೆ ಯಾವುದೇ ಋಣವನ್ನು ಜನತೆ ಮರೆಯಲು ಸಾಧ್ಯ. ಆದರೆ ಅನ್ನದಾನ ಋಣ ಎಂದಿಗೂ ಚಿರಸ್ಥಾಯಿ ಎಂದು ಹೇಳಿದರು.
ಇದೀಗ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿರುವ ಯುವಸಮೂಹ ಅತ್ಯಂತ ಶ್ರೇಷ್ಟತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಿದರೆ ಮಾತ್ರ ಮುಂದಿನ ಕಾರ್ಯಕ್ರಮಗಳಿಗೂ ಆಹ್ವಾನಿಸಲು ಇಚ್ಚಿಸುತ್ತಾರೆ. ಹೀಗಾಗಿ ವೃತ್ತಿಯನ್ನು ಗೌರವದಿಂದ ಕಾಣಬೇಕು ಎಂದರು.
ಆಧುನಿಕ ಅಬ್ಬರ ಜಗತ್ತಿನಲ್ಲಿ ವೇಗದಿಂದ ಛಾಯಾಗ್ರಾಹಣ ಕೆಲಸ ಸಾಗುತ್ತಿದೆ. ಆದರೆ ಆತುರದಿಂದ ತಪ್ಪುಗಳು ಹೆಚ್ಚಾಗುವ ಸಂಭವವಿದೆ. ನಿಧಾನಗತಿಯಲ್ಲಿ ಸಾಗಿ ಪರಸ್ಪರ ವೃತ್ತಿಬಾಂಧವರು ಒಡನಾಟ ಹೊಂದಿದರೆ ಪ್ರತಿಯೊಬ್ಬರಿಗೂ ವೃತ್ತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಎಲ್.ದಿನೇಶ್, ಉಪಾಧ್ಯಕ್ಷ ನದೀಮ್ ಪಾಶ, ಪ್ರಧಾನ ಕಾರ್ಯದರ್ಶಿ ರೇಣುಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net