

ವಿಜಯಪುರ: ಗೃಹ ಬಳಕೆ ಸಿಲಿಂಡರ್ ಅಕ್ರಮವಾಗಿ ರಿಫಿಲಿಂಗ್ ಮಾಡುತ್ತಿದ್ದ ಅಡ್ಡೆಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ನಾಲ್ಕು ಗೃಹ ಬಳಕೆ ಸಿಲಿಂಡರ್ ಹಾಗೂ ತೂಕದ ಯಂತ್ರ ವಶಪಡಿಸಿಕೊಂಡಿದ್ದಾರೆ.ನಗರದ ಹುಡ್ಕೋ ಕಾಲನಿ ಬಳಿ ಹಾಗೂ ರಾವೇಂದ್ರ ಕಾಲನಿ ಬಳಿ ಗೃಹ ಬಳಕೆ ಸಿಲಿಂಡರ್ಗಳನ್ನು ಬಳಸಿ ಅಕ್ರಮವಾಗಿ ಆಟೋಗಳಿಗೆ ತುಂಬಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಲ್ಲದೇ, ಈ ದಂಧೆಯಲ್ಲಿ ತೊಡಗಿದವರ ವಿರುದ್ಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಹಾರ ಇಲಾಖೆ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಜಲನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಹೇಶ ಸಂಖ, ಪೊಲೀಸ್ ಸಿಬ್ಬಂದಿ ವಿ.ಎಂ. ಪವಾರ, ಪಿ.ಆರ್. ರಾಠೋಡ, ಎಸ್.ವೈ. ನಾಟಿಕಾರ, ಎಚ್.ಎನ್. ಪೂಜಾರಿ, ಎನ್.ಬಿ. ಚವ್ಹಾಣ, ಸಚೀನಕುಮಾರ ನಂದೇಶ, ಎಂ.ಆರ್. ಸಿಂಧೆ ದಾಳಿಯಲ್ಲಿ ಭಾಗವಹಿಸಿದ್ದರು.
ವಿಜಯಪುರದ ಹುಡ್ಕೋ ಕಾಲನಿ ಬಳಿ ಹಾಗೂ ರಾವೇಂದ್ರ ಕಾಲನಿ ಬಳಿ ಅಕ್ರಮ ಗ್ಯಾಸ್ ರಿಫಿಲಿಂಗ್ ಡ್ಡೆಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ವಿಜಯಕುಮಾರ ಗುಮಶೆಟ್ಟಿ, ಮಹೇಶ ಸಂಖ, ವಿ.ಎಂ. ಪವಾರ ಮತ್ತಿತರರಿದ್ದಾರೆ.