ಆಹಾರ ದಿನಾಚರಣೆ ಕಲಬೆರಕೆ ಆಹಾರ ಆರೋಗ್ಯಕ್ಕೆ ಮಾರಕ

Food Day Adulteration of food is harmful to health
ಮುಧೋಳ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆಯಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಗೀತಾಮಣಿ ಪೌಷ್ಟಿಕ ಆಹಾರ, ತರಕಾರಿ ಮೇಳವನ್ನು ವೀಕ್ಷಿಸಿದರು. ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕತ್ತಿ , ತಾಪಂ ಇಒ ಸಂಜೀವ ಹಿಪ್ಪರಗಿ, ಉಪತಹಸೀಲ್ದಾರ್ ಎಸ್.ಐ.ಘಾಟನಿ, ಸಿಡಿಪಿಒ ಕಾಶೀಬಾಯಿ ಕೋರೆಗೋಳ, ಎಂ.ಪಿ.ರೋಣದ ಇದ್ದರು.
Published on

ಮುಧೋಳ : ಇತ್ತೀಚೆಗೆ ಕಲಬೆರಕೆ ಆಹಾರ ಸೇವನೆಯಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಕಲಬೆರಕೆ ಆಹಾರ ತ್ಯಜಿಸಿ ಸೊಪ್ಪು, ತರಕಾರಿ, ಕಾಳು ಕಡಿ ಸೇರಿ ಪೌಷ್ಟಿಕಾಂಶ ಇರುವ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕೆಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಗೀತಾಮಣಿ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಧೋಳ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಸರ್ಕಾರ ನೀಡುವ ಪೌಷ್ಟಿಕ ಆಹಾರವನ್ನು ಸರಿಯಾಗಿ ಮನೆ-ಮನೆಗೆ ಒದಗಿಸಬೇಕು. ಇದನ್ನು ಸೇವಿಸುವುದರಿಂದ ಗರ್ಭಿಣಿಯರು ಹಾಗೂ ಅವರ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯ ಬೆಳವಣಿಗೆಗೆ ಹಾಗೂ ಉತ್ತಮ ಮಕ್ಕಳ ಜನನಕ್ಕೆ ಸಹಾಯಕವಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಸರಸ್ವತಿ ಹೋಟ್ಕರ ಮಾತನಾಡಿ, ನಮ್ಮ ಭಾರತೀಯ ಸಂಪ್ರದಾಯದಲ್ಲಿ ನಮ್ಮ ಪೂರ್ವಜರು ಯಾವಾಗಲೂ ಹಣ್ಣು, ಹಂಪಲು ಸೇರಿ ಪೌಷ್ಟಿಕಾಂಶ ಹೊಂದಿದಂತಹ ಆಹಾರ ಪದ್ಧತಿ ಅನುಸರಿಸುತ್ತಿದ್ದರು. ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಜನ ಪಾಸ್ಟ್ ುಡ್‌ಗಳಾದ ಫಿಜ್ಜಾ, ಬರ್ಗರ್ ಹಾಗೂ ಇನ್ನಿತರ ಡೇರಿ ಉತ್ಪನ್ನಗಳ ಸೇವನೆಯಿಂದ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಜನ ಆದಷ್ಟು ಪೌಷ್ಟಿಕಾಂಶ ಹೊಂದಿದ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕತ್ತಿ, ತಾಪಂ ಇಒ ಸಂಜೀವ ಹಿಪ್ಪರಗಿ , ಉಪತಹಸೀಲ್ದಾರ್ ಎಸ್.ಐ. ಘಾಟನಿ, ಸಿಡಿಪಿಒ ಕಾಶೀಬಾಯಿ ಕೋರೆಗೋಳ, ಎಂ.ಪಿ.ರೋಣದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net