ಆಹಾರ, ಆರೋಗ್ಯ ಒಂದೇ ನಾಣ್ಯದ ಎರಡು ಮುಖ

Food and health are two sides of the same coin
ಬನಹಟ್ಟಿಯ ಡಾ. ಜಿ.ಎಚ್. ಚಿತ್ತರಗಿ ಆಸ್ಪತ್ರೆಯಲ್ಲಿ ನಡೆದ ಪುಸ್ತಕಾವಲೋಕನ-32 ಸಮಾರಂಭದಲ್ಲಿ ಅಥಣಿಯ ಡಾ. ಅಣ್ಣಪ್ಪ ಪಾಂಗಿ ಅವರ ಆಹಾರದಿಂದ ಆರೋಗ್ಯದೆಡೆಗೆ ಪುಸ್ತಕ ಕುರಿತು ಅವರಳಿಗೆ ತಜ್ಞ ಡಾ. ರವಿ ಜಮಖಂಡಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮ. ಕೃ. ಮೇಗಾಡಿ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಉತ್ತಮ ಬದುಕಿಗೆ ಆಹಾರ ಹಾಗೂ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ರಬಕವಿಯ ಅರವಳಿಕೆ ತಜ್ಞ ಡಾ. ರವಿ ಜಮಖಂಡಿ ಹೇಳಿದರು.

ಡಾ. ಜಿ. ಎಚ್. ಚಿತ್ತರಗಿ ಅವರ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕಸಾಪ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಕಸಾಪ ವಲಯಗಳ ಆಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಪುಸ್ತಕವಲೋಕನ-32 ಸಮಾರಂಭದಲ್ಲಿ ಅಥಣಿಯ ಡಾ. ಅಣ್ಣಪ್ಪ ಅ. ಪಾಂಗಿ ಅವರು ಬರೆದ ಆಹಾರದಿಂದ ಆರೋಗ್ಯದೆಡೆಗೆ ಪುಸ್ತಕದ ಕುರಿತು ಅವಲೋಕನ ಮಾಡಿ ಮಾತನಾಡಿದರು.

ನಿತ್ಯ ಜೀವನದಲ್ಲಿ ಯಾವ ಆಹಾರಗಳನ್ನು ಹೇಗೆ ತಿನ್ನಬೇಕು. ಯಾವ ಆಹಾರ ದೇಹಕ್ಕೆ ಒಳಿತು, ಯಾವುದನ್ನೂ ತಿನ್ನದೆ ಬುದಕುಬೇಡಿ, ತಿಂದು ಅದನ್ನು ಹೇಗೆ ಕರಗಿಸಿಕೊಳ್ಳಬೇಕು ಎಂಬುವುದನ್ನು ಅರಿತುಕೊಳ್ಳಬೇಕು. ತಿಂದ ಮೇಲೆ ಅದು ದೇಹದ ಮೇಲೆ ಪರಿಣಾಮ ಬೀರುವ ಕುರಿತು ಸಂಪೂರ್ಣವಾಗಿ ವಿವರಿಸಿದರು.

ಕೃತಿ ರಚನೆಕಾರ ಡಾ. ಅಣ್ಣಪ್ಪ ಪಾಂಗಿ ಮಾತನಾಡಿ, ಕರೋನಾ ವೇಳೆ ಮನೆಯಲ್ಲಿ ಸಮಯ ವ್ಯರ್ಥಮಾಡದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಪುಸ್ತಕ ಬರೆದಿದ್ದು, ಅದಕ್ಕೆ ಸಮಾಜದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ತಾಲೂಕಾ ಕಸಾಪ ಅಧ್ಯಕ್ಷ ಮ. ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿ. ಎಚ್. ಚಿತ್ತರಗಿ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಜಿ. ಬಿ. ಹೊಸೂರ, ಪ್ರೊ. ಎಂ. ಎಸ್. ಬದಾಮಿ, ಬಸವರಾಜ ಮೇಟಿ, ಶ್ರೀಶೈಲ ಬುರ್ಲಿ, ಮಹೇಶ ಮನ್ನಯ್ಯನವರಮಠ, ಡಿ. ಬಿ. ಜಾಯಗೊಂಡ, ಮಲ್ಲಿಕಾರ್ಜುನ ತುಂಗಳ, ಮೃತ್ಯುಂಜಯ ರಾಮದುರ್ಗ, ಶಿವಾನಂದ ಬಾಗಲಕೋಟಮಠ, ಮಹಾದೇವ ಕವಿಶೆಟ್ಟಿ, ಡಿ. ಎ. ಬಾಗಲಕೋಟ, ಬಸವರಾಜ ಮೇಟಿ, ನಂದಾ ಕೊಕಟನೂರ, ಯಶವಂತ ವಾಜಂತ್ರಿ, ವೆಂಕಟೇಶ ನಿಂಗಸಾನಿ, ಗೌರಿ ಮಿಳ್ಳಿ, ನೀಲಕಂಠ ದಾತಾರ, ಬಿ. ಎ. ದಾಶ್ಯಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net