ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ

ಕಂಪ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಎಎಸ್‌ಐ ಬಸವರಾಜ ಸಂಚಾರಿ ನಿಯಮಗಳ ಮಾಹಿತಿ ನೀಡಿದರು. ತಿಳಿಸಿದರು. ಎಚ್‌ಸಿಗಳಾದ ರವಿವರ್ಮ, ದತ್ತಾತ್ರೇಯ, ಸ್ಕೌಟ್ಸ್ ಅಂಡ್ ಗೈಡ್ಸ್ ತಾಲೂಕು ಕಾರ್ಯದರ್ಶಿ ಕೆ.ವಿಷ್ಣು, ಗೈಡ್ ಕ್ಯಾಪ್ಟನ್ ಸೀತು ಚಕ್ರವರ್ತಿ, ಸ್ಕೌಟ್ಸ್ ಮಾಸ್ಟರ್ ರಾಜೇಶ್ ಇದ್ದರು.

Published on

ಕಂಪ್ಲಿ: ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಿದರೆ ಅಪಘಾತಗಳ್ನು ತಡೆಯಲು ಸಾಧ್ಯ ಎಂದು ಆರಕ್ಷಕ ನಿರೀಕ್ಷಕ ಕೆ.ಬಿ.ವಾಸುಕುಮಾರ್ ಹೇಳಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಸ್ತೆ ಸಂಚಾರ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಉದಾಸೀನ ಮಾಡುವುದರಿಂದ ಅಪಘಾತವಾಗುತ್ತವೆ. ವಿದ್ಯಾರ್ಥಿ ದೆಸೆಯಲ್ಲಿಯೇ ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿದಿರಬೇಕು ಎಂದರು.

ಠಾಣೆಯಲ್ಲಿ ಉಪನ್ಯಾಸದ ಮೂಲಕ ತಿಳಿಸಲಾಯಿತು. ನಂತರ ಅಂಬೇಡ್ಕರ್ ವೃತ್ತದಲ್ಲಿ ಎಎಸ್‌ಐ ಬಸವರಾಜ ಹ್ಯಾಂಡ್ ಸಿಗ್ನಲ್ ಪ್ರಾತ್ಯಕ್ಷಿಕೆ ಮೂಲಕ ರಸ್ತೆ ಸಂಚಾರ ನಿಯಮಗಳನ್ನು ತೋರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net