ಶಾಸ್ತ್ರದ ಅನುಸರಣೆಯಿಂದ ಜೀವರಾಶಿಗೆ ಒಳಿತು

12sirsi2
Published on

ಶಿರಸಿ: ತಾಲೂಕಿನ ಕಡಬಾಳದ ಶ್ರೀಕದಂಬೇಶ್ವರ ದೇವರ ಅಷ್ಟಬಂಧ ಮಹೋತ್ಸವ ಹಾಗೂ ನೂತನ ದೇವಾಲಯ ಸಮರ್ಪಣೆ ಕಾರ್ಯಕ್ರಮವು ಶನಿವಾರ ಅದ್ಧೂರಿ ತೆರೆ ಕಂಡಿತು.

ಕದಂಬೇಶ್ವರ ದೇಗುಲದಲ್ಲಿ ಕಳೆದ ನಾಲ್ಕು ದಿನಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಬನವಾಸಿ ಶ್ರೀ ಮಧುಕೇಶ್ವರ ದೇವರ ಪ್ರತಿಬಿಂಬದಂತೆ ಇರುವ ಶ್ರೀಕದಂಬೇಶ್ವರ ದೇವರ ವಿಗ್ರಹವು ಉತ್ತರ ಕನ್ನಡ ಜಿಲ್ಲೆಯ 2ನೇ ಅತಿ ದೊಡ್ಡ ಶಿವಲಿಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಾಜು 1 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಆಗಮಶಾಸ್ತ್ರದ ಪ್ರಕಾರ ನಿರ್ಮಿಸಲಾದ ನೂತನ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ಮಂಜುಗುಣಿಯ ಶ್ರೀನಿವಾಸ ಭಟ್ಟ ಮಾರ್ಗದರ್ಶನದಲ್ಲಿ ಕೊಳಗಿಬೀಸ್ ಕುಮಾರ ಭಟ್ಟ ಅದ್ವೈರ್ಯದಲ್ಲಿ ಅದ್ಧೂರಿಯಾಗಿ ನೆರವೇರಿತು.

ಧರ್ಮಸಭೆ :

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ ಭಟ್ಟ ಮಂಜುಗುಣಿ, ‘ಪ್ರಕೃತಿಯಲ್ಲಿರುವ ದೈವಿಶಕ್ತಿಯ ಫಲವನ್ನು ಪಡೆಯಬೇಕೆಂದರೆ ಜನಸಾಮಾನ್ಯರ ಶ್ರಮ ಅಗತ್ಯವಾಗಿ ಬೇಕು. ಭಗವತಿಯ ಅತಿದೊಡ್ಡ ಶಕ್ತಿ ಕೇಂದ್ರ ಕಡಬಾಳ. ಭಗವತಿಯ ಶಕ್ತಿ ಕೇಂದ್ರದಲ್ಲಿ ಶಿವ ನೆಲೆಸಿದ್ದಾನೆ. ಶಾಸ್ತ್ರದ ಅನುಸರಣೆಯಿಂದ ಸಕಲ ಜೀವರಾಶಿಗೆ ಒಳಿತಾಗುತ್ತದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಅವರು ಕದಂಬೇಶ್ವರ ದೇಗುಲಕ್ಕೆ ಭೇಟಿ ನೀಡಿ ಕದಂಬರ ಇತಿಹಾಸದ ವೈಭವದ ಸಾಕ್ಷ್ಯಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯಕರ್ತ ಎಸ್.ಕೆ. ಭಾಗವತ್, ಜಗದೀಶ ಗೌಡ ಇತರರು ಉಪಸ್ಥಿತರಿದ್ದರು.

ಹೋರಾಟಗಾರ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಭೇಟಿ ನೀಡಿ, ದೇಗುಲ ನಿರ್ಮಾಣ ಕಾರ್ಯದ ವೇಳೆ ಸ್ಥಳದಾನ ಮಾಡಿದ ಗ್ರಾಮಸ್ಥರನ್ನು ಸನ್ಮಾನಿಸಿದರು.

ದೇಶಕ್ಕಾಗಿತ್ರಿಶೂಲ ಹೋಮ..!

ದೇಶದಲ್ಲಿ ಯುದ್ಧ ಭೀತಿ ಉಂಟಾದ ಪರಿಣಾಮ, ಲಕ್ಷಾಂತರ ಯೋಧರು ಹಗಲಿರುಳೆನ್ನದೆ ಗಡಿಯಲ್ಲಿ ದೇಶದ ಭದ್ರತೆಯಲ್ಲಿ ತೊಡಗಿದ್ದಾರೆ. ಆ ಎಲ್ಲ ಯೋಧರಿಗೆ ಶ್ರೀ ಕದಂಬೇಶ್ವರ ದೇವರು ಶಕ್ತಿ ನೀಡಲೆಂದು 3 ಸಾವಿರ ಅತ್ತಿ ಸಮೀಧದೊಂದಿಗೆ ವಿಶೇಷವಾಗಿ ಶಿವಧಾರಿತ ತ್ರಿಶೂಲ ಹೋಮ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net