ಮಹಾತ್ಮರ ಆದರ್ಶ ಪಾಲಿಸುವುದರಿಂದ ಯಶಸ್ಸು

Kempegouda Jayanti
Published on

ಹಾನಗಲ್ಲ: ಮಹಾತ್ಮರ ಆದರ್ಶ ಅನುಸರಿಸುವುದರಿಂದ ಬದುಕಿನಲ್ಲಿ ವೈಯಕ್ತಿಕ ಯಶಸ್ಸಿನ ಜತೆಗೆ ದೇಶ, ಸಮಾಜದ ಹಿತ ಕಾಯುವ ಪ್ರೇರಣೆಯಾಗಬೇಕು ಎಂದು ತಹಸೀಲ್ದಾರ್ ಎಸ್.ರೇಣುಕಮ್ಮ ಹೇಳಿದರು.

ಪಟ್ಟಣದ ಜಗಜೀವನರಾಂ ಭವನದಲ್ಲಿ ತಾಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಮಾರುತಿ ಶಿಡ್ಲಾಪುರ ಮಾತನಾಡಿ, ಕೆಂಪೇಗೌಡರ ರಾಜನೀತಿ, ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿ, ಪರಿಸರ ಪ್ರೀತಿ, ನೀರಾವರಿ, ಅಚ್ಚುಕಟ್ಟಾದ ಆಡಳಿತ ಮಾದರಿಯಾಗಿದೆ ಎಂದರು.

ಪುರಸಭೆ ಸದಸ್ಯ ಪರಶುರಾಮ ಖಂಡೂನವರ, ಉಪತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಎಸ್. ದೇವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಕೆಂಪೆಳ್ಳೇರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ, ತಾಪಂ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಆನಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀನಿವಾಸ ದೀಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.

ಸ್ಪರ್ಧೆ ವಿಜೇತರು: ಕೆಂಪೇಗೌಡರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜೀವನ ಸಾಧನೆ ಪ್ರಬಂಧ ಸ್ಪರ್ಧೆಯಲ್ಲಿ ಶ್ಯಾಡಗುಪ್ಪಿಯ ಸರ್ಕಾರಿ ಪ್ರೌಢಶಾಲೆಯ ಅನುಷಾ ಬೆಣ್ಣಿ ಪ್ರಥಮ, ಬೈಚವಳ್ಳಿ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ ಹಿತ್ತಲದವರ ದ್ವಿತೀಯ, ಲಕ್ಷ್ಮೀ ಬಸಾಪುರ ತೃತೀಯ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net