ಸುರಕ್ಷಿತ ಕುಟುಂಬ ಯೋಜನೆ ಅನುಸರಿಸಿ : ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿದ್ಯಾಕುವಾರಿ ಸಲಹೆ

11TMK_Janasankya_Dina
Published on

ತುಮಕೂರು : ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಮದ ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕುಟುಂಬ ಯೋಜನೆ, ಕುರಿತು ಅರಿವು ಮೂಡಿಸುವ ‘ಪ್ರಚಾರ ವಾಹನ’ಕ್ಕೆ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಚಾಲನೆ ನೀಡಿದರು.

ವಿಪತ್ತಿನಲ್ಲೂ ಕುಟುಂಬ ಯೋಜನೆ ಸೇವೆ, ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ಎಂಬ ವಿಶ್ವ ಸಂಸ್ಥೆಯ ಘೋಷವಾಕ್ಯದೊಂದಿಗೆ ಸಂಚರಿಸಲಿರುವ ಈ ಜಾಥಾ ಪ್ರಚಾರದ ವಾಹನ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ತೆರಳಿ ಕುಟುಂಬ ಯೋಜನಾ ವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ದೇಶಾದ್ಯಂತ ಜನಸಂಖ್ಯಾ ದಿನಾಚರಣೆ ನಡೆಯುತ್ತಿದೆ, ಭಾರತದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವುದರಿಂದ ಈ ದಿನಾಚರಣೆ ಯಶಸ್ವಿಯಾಗಿಸಬೇಕು. ವಿಶ್ವದ ಜನಸಂಖ್ಯೆಯಲ್ಲಿ ಭಾರತ 2ನೇ ಸ್ಥಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಸುರಕ್ಷಿತವಾದ ಕುಟುಂಬ ಯೋಜನೆ ಎಲ್ಲರೂ ಅನುಸರಿಸಬೇಕು. ಇದರಲ್ಲಿ ಪುರುಷರ ಪಾತ್ರ ಬಹುಮುಖ್ಯವಾಗಿದೆ. ಪುರುಷರು ಕುಟುಂಬ ಯೋಜನೆಗೆ ಮುಂದೆ ಬರಬೇಕು ಎಂದರು.

ಜಿಲ್ಲೆಯಲ್ಲಿ ಕುಟುಂಬ ಯೋಜನೆ ಮತ್ತು ಜನಸಂಖ್ಯೆ ನಿಯಂತ್ರಣ ಕುರಿತು ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಜನರು ಇದರ ಮಹತ್ವ ಅರಿತುಕೊಂಡು ಕುಟುಂಬ ಯೋಜನೆ ಅನುಸರಿಸಿದರೆ ತಮ್ಮ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು ಎಂದ ಅವರು, ಸುರಕ್ಷಿತ ಲೈಂಗಿಕತೆ, ಸುರಕ್ಷಿತ ಕುಟುಂಬ ಯೋಜನೆಯಲ್ಲಿ ಎಲ್ಲರೂ ತೊಡಗಬೇಕು ಮತ್ತು ಅದರ ಮಹತ್ವ ಅರಿಯಬೇಕು ಎಂದು ಸಲಹೆ ನೀಡಿದರು.

ದಂಪತಿ ಮಕ್ಕಳ ಜನನದ ಮಧ್ಯೆ ಅಂತರ ಅನುಸರಿಸುವ ಕುರಿತು ವಾಹಿತಿ ಇಲ್ಲ. ಹಾಗಾಗಿ, ಮಕ್ಕಳ ಜನನದ ಅಂತರದ ಸಂಬಂಧ ಪೋಸ್ಟರ್ ಸಹ ಮುದ್ರಿಸಲಾಗಿದೆ. ಇಬ್ಬರು ಮಕ್ಕಳ ನಡುವೆ ಕನಿಷ್ಠ ಅಂತರವನ್ನು ಅನುಸರಿಸಬೇಕಾಗುತ್ತದೆ. ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಜಿಲ್ಲಾಡಳಿತದಿಂದ ಮಾಡಲಾಗುತ್ತಿದೆ ಎಂದರು.

ಪ್ರತಿ ತಾಲೂಕಿನಲ್ಲೂ ಜಾಗೃತಿ : ವಿಪತ್ತಿನಲ್ಲೂ ಕುಟುಂಬ ಯೋಜನೆಯ ಸೇವೆ ಮತ್ತು ಸ್ವಾವಲಂಬಿ ಆಹಾರವು ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ಎಂದು ವಿಶ್ವಸಂಸ್ಥೆಯಿಂದ ೋಷವಾಕ್ಯ ಬಂದಿದೆ. ಇದರಡಿ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಸಂಬಂಧ ಜನರಿಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ಹೇಳಿದರು. ಜಾಗೃತಿ ವಾಹನ ಪ್ರತಿ ತಾಲೂಕಿನಲ್ಲೂ ಸಂಚರಿಸಿ ಜನಸಂಖ್ಯೆ ನಿಯಂತ್ರಣ ಕುರಿತು ಅರಿವು ಮೂಡಿಸಲಿದೆ. ಜತೆಗೆ ಬೀದಿ ನಾಟಕ, ಧ್ವನಿವರ್ಧಕಗಳ ಮೂಲಕ ಪ್ರಚಾರ ವಾಡಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲೂ ಈ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net