

ರಾಯಚೂರು: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮತಯಂತ್ರಗಳ ಬದಲು ಬ್ಯಾಲೇಟ್ ಪೇಪರ್ ಬಳಕೆ ಮಾಡಲಾಗುತ್ತಿದ್ದು, ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಕಾರಿಗಳು ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿ ತಿಳಿಸಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಮೈಕ್ರೋ ಅಬ್ಸರ್ವರ್ಸ್‌ಗಳಿಗೆ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮತದಾನ ಆರಂಭಕ್ಕೂ ಮುನ್ನ ಏಜೆಂಟ್‌ರ ಸಮ್ಮುಖದಲ್ಲಿ ಮತಪೆಟ್ಟಿಗೆಯನ್ನು ಸೀಲ್ ಮಾಡಬೇಕು ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಮತದಾರರ ಗುರುತು, ಶಾಹಿ ಹಾಕುವುದು, ಏಜೆಂಟ್‌ರ ಪರಿಶೀಲನೆ ಮಾಡಬೇಕು. ಮೈಕ್ರೋ ಅಬ್ಸರ್ವರ್ಸ್‌ಗಳಿಗೆ ಚೆಕ್ ಲಿಸ್ಟ್ ನೀಡುತ್ತಿದ್ದು, ಅದರಲ್ಲಿನ 11 ಅಂಶಗಳನ್ನು ನಮೂದಿಸಬೇಕು. ನೇಮಕಗೊಂಡ ಸಿಬ್ಬಂದಿ ಮತದಾನದ ಹಿಂದಿನ ದಿನವೇ ಮತ ಕೇಂದ್ರದಲ್ಲಿ ಇರಬೇಕು.
ಮತದಾರರ ಪಟ್ಟಿಯಲ್ಲಿರುವಂತೆ ಅಕಾರಿಗಳು ಮತದಾರರ ಯಾವ ಕೈಗೆ ಶಾಹಿ ಹಾಕುತ್ತಿದ್ದಾರೆ, ಹೆಸರು, ಸಹಿ ಮತ್ತು ಇನ್ನಿತರ ಚಟುವಟಿಕೆ ಮಾಡುತ್ತಿದ್ದಾರೆಯೇ ಎನ್ನುವುದನ್ನು ಪರಿಶೀಲನೆ ನಡೆಸಬೇಕು ಎಂದು ಅಶೋಕ ದುಡಗುಂಟಿ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಎಸ್.ಎಸ್.ಸಂಪಗಾವಿ, ಚುನಾವಣೆ ತರಬೇತುದಾರ ಸದಾಶಿವಪ್ಪ ಹಾಗೂ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಅಕಾರಿಗಳು ಉಪಸ್ಥಿತರಿದ್ದರು.