ಸ್ವ ಇಚ್ಛೆಯಿಂದ ಪೂಜೆ ವಿಧಿ-ವಿಧಾನ ಪಾಲಿಸಿ

Shree Vidyadheesha Shripada teertha Vader
Published on

ದಾಂಡೇಲಿ: ಸಮಾಜದ ಪ್ರತಿಯೊಬ್ಬರು ದೇವರಲ್ಲಿ ಮತ್ತು ಗುರುಗಳಲ್ಲಿ ಶ್ರದ್ಧಾ ಭಕ್ತಿಯನ್ನು ತೋರಿಸಬೇಕು. ಸ್ವ ಇಚ್ಛೆಯಿಂದ ಪುಜಾ ವಿಧಿ-ವಿಧಾನಗಳನ್ನು ಪಾಲಿಸಬೇಕು ಎಂದು ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನುಡಿದರು.

ಅವರು ದಾಂಡೇಲಿಯ ಶ್ರೀ ಮುಖ್ಯಪ್ರಾಂತರ್ಗತ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ದಾಂಡೇಲಿ ಲಕ್ಷ್ಮೀವೆಂಕಟರಮಣ ದೇವಾಲಯ ವಿಶೇಷವಾದದ್ದು. ಇಲ್ಲಿ ವೆಂಕಟರಮಣನ ಜತೆ ಲಕ್ಷ್ಮೀ ದೇವಿ ಕೂಡ ಉದ್ಭವಿಸಿದ್ದಾಳೆ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ, ಜಿ.ಎಸ್.ಬಿ. ಸಮಾಜದ ಅಧ್ಯಕ್ಷ ರಾಧಾ ಕೃಷ್ಣ ಹೆಗಡೆ, ದಾಂಡೇಲಿ ಶಾಖಾ ಮಠದ ಅಧ್ಯಕ್ಷ ಜನಾರ್ಧನ ಪೂಜಾರ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net