ವೇಮನರ ತತ್ವಾದರ್ಶ ಪಾಲನೆ ಮಾಡಿ

vemana
ಜಮಖಂಡಿ ನಗರದ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ವೇಮನರ ಜಯಂತಿ ಆಚರಿಸಲಾಯಿತು. ಮಾಜಿ ಶಾಸಕ ಆನಂದ ನ್ಯಾಮಗೌಡ, ನಾಡೋಜ ಡಾ. ಎಚ್.ಜಿ. ದಡ್ಡಿ, ಡಾ. ಕೃಷ್ಣಾ ಬಣ್ಣದ, ಡಾ. ಆರ್.ಎನ್. ಸೋನವಾಲ್ಕರ ಇತರರಿದ್ದರು.
Published on

ಜಮಖಂಡಿ ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು. ಇಂತಹ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಶುಕ್ರವಾರ ನಡೆದ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಯಂತಿಗಳು ಒಂದೇ ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಸಮುದಾಯದವರು ಎಲ್ಲ ಮಹನೀಯರ ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದರು.

ತಹಸೀಲ್ದಾರ್ ಸದಾಶಿವ ಮಕ್ಕೋಜಿ ಮಾತನಾಡಿ, ವೇಮನರು ಸಾಮಾನ್ಯ ಆಡು ಭಾಷೆಯಲ್ಲಿ ತ್ರಿಪದಿ ಪದ್ಯಗಳನ್ನು ರಚಿಸಿ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾಯೊಗಿಯಾಗಿದ್ದರು ಎಂದರು.

ನಾಡೋಜ ಡಾ. ಎಚ್.ಜಿ. ದಡ್ಡಿ ಮಾತನಾಡಿದರು.

ಡಾ. ಕೃಷ್ಣಾ ಬಣ್ಣದ, ಡಾ. ಆರ್.ಎನ್. ಸೋನವಾಲ್ಕರ, ಡಾ. ವಿಜಯಲಕ್ಷ್ಮೀ ತುಂಗಳ, ಡಾ. ಸುಧೀರ ಬೆನಕಟ್ಟಿ, ಡಾ. ಎಸ್.ಬಿ. ನಾಯ್ಕ, ಡಾ. ಮಹೇಶ ಪಾಟೀಲ, ರಾಜೇಂದ್ರ ನಾಯ್ಕ, ಉಮೇಶ ಸಿದರಡ್ಡಿ, ಕಲ್ಲಪ್ಪ ಗಿರಡ್ಡಿ, ಆರ್.ಜಿ. ಪೂಜಾರಿ, ಪಿ.ಎಸ್. ಚೌರಡ್ಡಿ, ಕುಮಾರಗೌಡ ಪಾಟೀಲ, ಶರತಚಂದ್ರ ಪಾಟೀಲ, ಮಹಾದೇವಗೌಡ ಪಾಟೀಲ, ಬಸವರಾಜ ಸಾಹುಕಾರ, ಕೃಷ್ಣಾ ಮರೇನಿ, ಸುಧಾ ಉದಪುಡಿ, ಸುಜಾತಾ ಚೌರಡ್ಡಿ, ಬಸವರಾಜ ಸಿಂಧೂರ, ಹೊಸಕೇರಿ, ಭಗವಾನ ಗುಳನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net