ಸಾಲ ವಸೂಲಿ ಮಾಡುವಾಗ ಕಾನೂನಿನ ಮಾನದಂಡ ಪಾಲಿಸಿ

3KDR6
Published on

ಕಡೂರು: ಸ್ಥಳೀಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಹಕರಿಗೆ ಸಾಲ ನೀಡುವಾಗ ಮತ್ತು ವಸೂಲಿ ಸಂದರ್ಭದಲ್ಲಿ ಕಾನೂನಿನ ಮಾನದಂಡಗಳನ್ನು ಅನುಸರಿಸದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಎಚ್ಚರಿಕೆ ನೀಡಿದರು.

ಕಡೂರು ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ನಡೆದ ಮೈಕ್ರೋ ಫೈನಾನ್ಸ್ ಅಧಿಕಾರಿ, ಸಿಬ್ಬಂದಿ, ಡಿಎಸ್‌ಎಸ್ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಶಾಂತಿ ಸಭೆ ನಡೆಸಿ ಮಾತನಾಡಿ, ಕಚೇರಿ ಕರ್ತವ್ಯದ ಸಮಯ ಬಿಟ್ಟು ಬೇರೆ ಸಂದರ್ಭಗಳಲ್ಲಿ ಸಾಲಗಾರರ ಮನೆಗೆ ಗುಂಪಿನೊಂದಿಗೆ ತೆರಳಿ ವಸೂಲಾತಿಗೆ ಮುಂದಾಗಿ ಆತ್ಮಹತ್ಯೆಗೆ ಶರಣಾಗುವ ಹಾಗೂ ಮಾನಸಿಕವಾಗಿ ಕುಗ್ಗಿರುವ ಪ್ರಕರಣಗಳನ್ನು ಗಮನಿಸಿ ಈ ಸಭೆ ಮೂಲಕ ತಿಳವಳಿಕೆ ನೀಡಲಾಗುತ್ತಿದೆ.

ತಾಲೂಕಿನಲ್ಲೂ ಇಂತಹ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಸಭೆ ಕರೆದು ಕಾನೂನು ರೀತಿ ಸಮರ್ಪಕ ಮಾಹಿತಿ ಮತ್ತು ಸಾಲ ವಿತರಣೆಯಲ್ಲಿ ವಸೂಲಿ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ಸಾಲ ವಸೂಲಿಗೆ ಕಾನೂನು ಮೀರಿ ಹೋದಲ್ಲಿ ಕಠಿಣ ಕ್ರಮಕ್ಕೆ ಅವಕಾಶ ನೀಡದಂತೆ ನಿಯಮ ಪಾಲಿಸುವ ಜತೆ ಮಾನವೀಯತೆ ಮೈಗೂಡಿಸಿಕೊಳ್ಳಬೇಕು ಎಂದರು.

ಪಿಎಸೈ ಲೀಲಾವತಿ, ಡಿಎಸ್‌ಎಸ್ ಮುಖಂಡರಾದ ಎಂ.ಕೃಷ್ಣಪ್ಪ, ಚಿಕ್ಕಿಂಗಳ ಗ್ರಾಪಂ ಅಧ್ಯಕ್ಷ ಪ್ರಕಾಶ್ ನಾಯ್ಕ, ಲಕ್ಷ್ಮಣಪ್ಪ, ರಾಘವೇಂದ್ರ, ಜಗದೀಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net