

ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ಸ್ಪಽðಸುತ್ತಿರುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಭಾರತ ಚುನಾವಣಾ ಆಯೋಗದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಚುನಾವಣಾಽಕಾರಿ ಹಾಗೂ ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.
ತಮ್ಮ ಕಚೇರಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಅಭ್ಯರ್ಥಿಗಳು ಮತ್ತು ಏಜೆಂಟರ ಸಭೆಯಲ್ಲಿ ಅವರು ಮಾತನಾಡಿದರು.
ಅಭ್ಯರ್ಥಿಗಳಿಗೆ ಆಯೋಗದ ನಿಯಮಾವಳಿಗಳ ಪುಸ್ತಕ, ಇವಿಎಂ ಮಾಹಿತಿ, ಮತದಾರರ ಪಟ್ಟಿ ಮತ್ತು ನಿಯಮಗಳ ಕೈಪಿಡಿ ನೀಡಲಾಗಿದೆ. ಗೊಂದಲವಿದ್ದರೆ ಅಥವಾ ಸ್ಪಷ್ಟೀಕರಣ ಅಗತ್ಯವಿದ್ದರೆ ಚುನಾವಣಾ ಸಹಾಯವಾಣಿ ೧೯೫೦ಗೆ ಕರೆ ಮಾಡಬೇಕು. ಪ್ರತಿ ಅಭ್ಯರ್ಥಿಗೆ ೯೫ ಲಕ್ಷ ರೂಪಾಯಿವರೆಗೆ ಖರ್ಚು ಮಾಡುವ ಅವಕಾಶವಿದೆ. ಎಲ್ಲರೂ ಖರ್ಚು ವೆಚ್ಚದ ವರದಿ ಸಲ್ಲಿಸಬೇಕು. ಮನೆಮನೆಗೆ ವೋಟರ್ ಸ್ಲಿಪ್ ವಿತರಣೆ ಆರಂಭವಾಗಿದೆ ಎಂದರು.
ಮೇ ೧, ೨ ಮತ್ತು ೩ರಂದು ಪೋಸ್ಟಲ್ ವೋಟರ್ ಸೆಂಟರ್ ತೆರೆಯಲಾಗುತ್ತದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೇರೆ ಜಿಲ್ಲೆಯಲ್ಲಿ ಮತದಾರರಾಗಿರುವ ಸೇವಾ ಸಿಬ್ಬಂದಿಗೆ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದರು.
ಕಲಘಟಗಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಽಕಾರಿ ಸಿದ್ದು ಹುಲ್ಲೋಳಿ ಪ್ರಾತ್ಯಕ್ಷಿಕೆ ಮೂಲಕ ಚುನಾವಣಾ ನಿಯಮಗಳು ಹಾಗೂ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದರು.
ವೆಚ್ಚ ನೊಡಲ್ ಅಽಕಾರಿ ವಿಶ್ವನಾಥ ಅಭ್ಯರ್ಥಿಗಳ ಖರ್ಚು, ವೆಚ್ಚ, ನಿರ್ವಹಿಸಬೇಕಾದ ದಾಖಲೆಗಳ ಕುರಿತು ವಿವರಿಸಿದರು.
ಚುನಾವಣಾ ಸಾಮಾನ್ಯ ವೀಕ್ಷಕ ಅಜಯ ಗುಪ್ತಾ, ಪೊಲೀಸ್ ವೀಕ್ಷಕ ಭನ್ವರಲಾಲ ಮೀನಾ, ವೆಚ್ಚ ವೀಕ್ಷಕ ಭೂಷಣ ಪಾಟೀಲ, ಜಿ.ಪಂ. ಸಿಇಒ ಸ್ವರೂಪ ಟಿ.ಕೆ., ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಇತರರಿದ್ದರು.