ತರಬೇತುದಾರರ ಸೂಚನೆ ಪಾಲಿಸಿ ಜಯ ಸಾಧಿಸಿ

TRAINING
Published on

ನರೇಗಲ್ಲ: ತರಬೇತುದಾರರ ಸಲಹೆ-ಸೂಚನೆಗಳನ್ನು ಚಾಚೂ ತಪ್ಪದೆ ಅನುಸರಿಸಿದರೆ ಜಯ ಕಟ್ಟಿಟ್ಟ ಬುತ್ತಿ ಎಂದು ಎಂಸಿಎಸ್ ಶಾಲೆಯ ಮುಖ್ಯಶಿಕ್ಷಕಿ ಲಲಿತಾ ಕಲಾಲಬಂಡಿ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕ ಶಾಲಾ ಮೈದಾನದಲ್ಲಿ ಚೈತನ್ಯ ಕ್ರೀಡಾಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ತಂಡದ ಸಬ್ ಜ್ಯೂನಿಯರ್ ಬಾಲಕಿಯರ ಅಟ್ಯಾಪಟ್ಯಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

ಒಗ್ಗಟ್ಟಿನಿಂದ ಕ್ರೀಡೆಯಲ್ಲಿ ಪಾಲ್ಗೊಂಡು ತಂಡದ ಗೆಲುವಿಗೆ ಎಲ್ಲರೂ ಶ್ರಮಿಸುವ ಮೂಲಕ ರಾಜ್ಯದ ಕೀರ್ತಿಪತಾಕೆಯನ್ನು ಹಾರಿಸಬೇಕು ಎಂದು ಆಶಿಸಿದರು.

ರೋಣ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ ಮಾತನಾಡಿ, ಪ್ರತಿಯೊಬ್ಬ ಕ್ರೀಡಾಪಟುಗಳು ಸ್ಪರ್ಧಾತ್ಮಕವಾಗಿ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡೆಗೆ ಗೌರವ ತರುವಂತಹ ಕಾರ್ಯಮಾಡಬೇಕು. ತಮ್ಮ ನಡವಳಿಕೆ ಇತರರಿಗೆ ಮಾದರಿಯಾಗುವಂತಿರಬೇಕು ಅದರಿಂದ ರಾಜ್ಯದ ಘನತೆ ಹೆಚ್ಚಿಸುವಂತಿರಬೇಕು ಎಂದರು.

ಚೈತನ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ನಿಂಗರಾಜ ಬೇವಿನಕಟ್ಟಿ ಮಾತನಾಡಿದರು. ಶ್ರೀ ಅಭಿನವ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯೆ ಅನಸೂಯಾ ಪಾಟೀಲ, ತರಬೇತುದಾರ ಶಿಕ್ಷಕ ವಿ.ಎ. ಕುಂಬಾರ, ಸಂಸ್ಥೆಯ ಕಾರ್ಯದರ್ಶಿ ಸಂತೋಷ ಯಳಮಲಿ, ಪ್ರವೀಣ ಘಂಟಿ, ಜ್ಯೋತಿ ಪೂಜಾರ, ಅನಿತಾ ಮಾದರ, ಜ್ಯೋತಿ ಬೆಳವಟಗಿ, ಪ್ರೀತಿ ಬುಳ್ಳಾ, ಸುರೇಖಾ ಕೊಂಡಿ, ವೀರೇಶ ಕುರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net