

ದೇವದುರ್ಗ: ಬಸವಾದಿ ಶರಣರು ರಚಿಸಿರುವ ವಚನಗಳು ಸಮಾಜಕ್ಕೆ ಮಾರ್ಗದರ್ಶನವಾಗಿದ್ದು, ಪ್ರತಿಯೊಬ್ಬರೂ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಬಸವಾದಿ ಶರಣರು ಆದರ್ಶವಾಗಿರುವುದು ಮಾತ್ರವಲ್ಲ ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂದು ನಮಗೆ ತೋರಿಸಿಕೊಟ್ಟಿದ್ದಾರೆ. ಕಾಯಕ, ದಾಸೋಹ, ಲಿಂಗಪೂಜೆ ಎನ್ನುವ ಮೂರು ಮಹತ್ವದ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ಈ ತತ್ವಗಳನ್ನು ಅನುಸರಿಸಿದರೆ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಗ್ರೇಡ್-2 ತಹಸೀಲ್ದಾರ್ ಭೀಮರಾಯ ನಾಯಕ ಮೇಟಿ, ಕಂದಾಯ ನಿರೀಕ್ಷಕರಾದ ಭೀಮನಗೌಡ ಪಾಟೀಲ್, ದೇವರೆಡ್ಡಿ, ಮಹಾದೇವಪ್ಪ, ರಾಕೇಶ್ ನಾಯಕ್, ಹರೀಶ್, ಮುಖಂಡರಾದ ಹನುಮಂತಪ್ಪ ಮನ್ನಾಪುರ, ಡಿ.ಶ್ರೀನಿವಾಸ್, ಶಿವಕುಮಾರ್ ಛಲವಾದಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಟಿ.ರಂಗನಾಥ, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಗೋಳಪ್ಪ ಭೀಮಶಂಕರ್, ಬಸಲಿಂಗಪ್ಪ, ಚನ್ನಬಸವ ಗಣೇಕಲ್, ಅಯ್ಯಪ್ಪ ಆನೆಗುಂದಿ, ಟಿ. ಜಯರಾಜ ಇತರರಿದ್ದರು.