ನೋಟಿಸ್ ನೀಡುವ ಮುನ್ನ ಕಾನೂನು ಪಾಲಿಸಿ

04 kgd protest
ಕಂಪ್ಲಿ ಶಾಸಕ ಜೆ.ಎನ್.ಗಣೇಶಗೆ ಬಾದನಹಟ್ಟಿಯ ಬಡವರ ಮನೆ ಉಳಿವಿಗಾಗಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಸಮಿತಿ ಸಂಚಾಲಕ ಗುರಳ್ಳಿ ರಾಜ, ಪ್ರಮುಖರಾದ ಗುರಳ್ಳಿ ನಾಗರಾಜ, ಮಣ್ಣೂರು ಕರೆಯಣ್ಣ, ಕೇಶವ, ಕರಿಯಮ್ಮ, ತಿಪ್ಪಯ್ಯ, ಏಳುರೊಟ್ಟಿ ಜಡೆಪ್ಪ ಇತರರಿದ್ದರು.
Published on

ಕುರುಗೋಡು: ಬಾದನಹಟ್ಟಿ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಹೆಸರಲ್ಲಿ ಬಡ ಜನರ ಮನೆ ತೆರವುಗೊಳಿಸುವ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿ ಬಡವರ ಮನೆ ಉಳಿವಿಗಾಗಿ ಹೋರಾಟ ಸಮಿತಿಯಿಂದ ಶಾಸಕ ಜೆ.ಎನ್ ಗಣೇಶಗೆ ಕಂಪ್ಲಿಯಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.

ಸಮಿತಿ ಸಂಚಾಲಕ ಗುರಳ್ಳಿ ರಾಜ ಮಾತನಾಡಿ, ಗ್ರಾಮದಲ್ಲಿ ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಲಾಗುತ್ತಿದ್ದು, ಬಡವರ ಮನೆ ತೆರವಿಗೆ ನಿರ್ಧರಿಸಲಾಗಿದೆ. ಈ ಮೂಲಕ ಬಡವರು ಜೀವಿಸುವ ಹಕ್ಕನ್ನೇ ಕಸಿದುಕೊಂಡಂತಾಗುತ್ತದೆ. ಅಧಿಕಾರಿಗಳು ನೋಟಿಸ್ ನೀಡುವುದಕ್ಕೆ ಸಂಬಂಧಿಸಿದಂತೆ ಕಾನೂನು ಪಾಲಿಸಬೇಕು.

ಜನರು ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು. ಮನೆ ಹಾಗೂ ಜಮೀನು ಕಳೆದುಕೊಳ್ಳುವ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಶಾಸಕ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net